ತುಮಕೂರು : ಇಬ್ಬರು ರಾಜ್ಯ ಪ್ರಭಾವಿ ಹಾಗೂ ಒಬ್ಬ ಕೇಂದ್ರ ಸಚಿವರಿರೋ ತುಮಕೂರು ಜಿಲ್ಲೆಯಲ್ಲೇ ಸರ್ಕಾರಿ ಹಾರ್ಟ್ ಸ್ಪೆಷಲಿಸ್ಟ್ ಇಲ್ಲದಂತಾಗಿದೆ. ಇದರಿಂದಾಗಿ ಹಾರ್ಟ್ ಪೇಷೆಂಟ್ಸ್ ಗೆ ಚಿಕಿತ್ಸೆಗೆ ಖಾಸಗಿ ವೈದ್ಯರೇ ಗತಿ ಅನ್ನೋ ಅಂತಾಗಿದೆ. ಹೀಗಾಗಿ ತುಮಕೂರಿನಲ್ಲಿ ಹೃದಯಾಘಾತಕ್ಕೆ ಚಿಕಿತ್ಸೆ ಪಡೆಯಬೇಕು ಅಂದ್ರೆ ಲಕ್ಷ ಲಕ್ಷ ಹಣ ತೆತ್ತು ಪಡಿಬೇಕಾದಂತ ಸ್ಥಿತಿ ಇದೆ.
ತುಮಕೂರು ಜಿಲ್ಲೆಯಲ್ಲಿ ಹಲವು ತಿಂಗಳಿಂದ ಹಾರ್ಟ್ ಸರ್ಜನ್ ಹುದ್ದೆ ಖಾಲಿ ಇದೆ. ಇದಕ್ಕೂ ಹೆಚ್ಚಿನ ಶಾಕಿಂಗ್ ವಿಚಾರ ಅಂದರೆ ತುಮಕೂರು ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿನ ಇಸಿಜಿ ಪರೀಕ್ಷಾ ವರದಿ ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ. ಕಳೆದ 6 ತಿಂಗಳಲ್ಲಿ ಒಟ್ಟು 21,707 ಜನರಿಗೆ ಇಸಿಜಿ ಮಾಡಿಸಲಾಗಿದ್ದು, ಇದರಲ್ಲಿ 1,533 ಜನರ ಹೃದಯದ ಸ್ಥಿತಿ ಕ್ರಿಟಿಕಲ್ ಆಗಿದ್ದು, 442 ಜನರಲ್ಲಿ ಹಠಾತ್ ಹೃದಯಾಘಾತ ಕಾಣಿಸಿಕೊಂಡಿದೆ. ಸ್ಟೆಮಿ ಲ್ಯಾಬ್ ರಿಪೋರ್ಟ್ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 11 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸದ್ಯ ಈ ವರದಿಗಳನ್ನು ನೋಡಿದರೆ ನಿಜಕ್ಕೂ ಸಾರ್ವಜನಿಕರ ಹಾರ್ಟ್ ಬೀಟ್ ಜೋರಾಗುವಂತಿದೆ.