ಹಾಸನ : ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಸರಣಿ ಸಾವು ಪ್ರಕರಣಗೊಂಡಿದೆ. ಹೃದಯಾಘಾತದಿಂದಾಗಿ ಮತ್ತಿಬ್ಬರು ಮೃತಪಟ್ಟಿದ್ದು, ಈ ಮೂಲಕ ಹಾಸನದಲ್ಲಿ ಹೃದಯಾಘಾತಕ್ಕೆ ಬಲಿಯಾದವರ ಸಂಖ್ಯೆ 35ಕ್ಕೆ ಏರಿದೆ. ಹಾಸನ ನಗರದ ದಾಸರಕೊಪ್ಪಲಿನಲ್ಲಿ ಬಿ.ಎನ್.ವಿಮಲಾ (55) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೂಲತಃ ಸಕಲೇಶಪುರ ತೋಟದಗದ್ದೆ ಗ್ರಾಮದ ಕುಮಾರ್ ಎಂಬುವವರ ಪತ್ನಿ ಬಿ.ಎನ್.ವಿಮಲಾ ಗುರುವಾರ ರಾತ್ರಿ ಮನೆಯಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಕಳೆದ ಒಂದೂವರೆ ತಿಂಗಳಿನಲ್ಲಿ 35 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಹೃದಯಾಘಾತ ಪ್ರಕರಣಗಳಿಂದ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ.
ಇನ್ನೊಂದೆಡೆ ಹಾಸನ ಹೊರವಲಯದ ಚಿಕ್ಕಕೊಂಡಗುಳ ಗ್ರಾಮದಲ್ಲಿಹೃದಯಾಘಾತದಿಂದಾಗಿ 21 ವರ್ಷದ ಮದನ್ ಸಾವನ್ನಪ್ಪಿದ್ದಾನೆ. ಮೂಲತಃ ಹಾಸನ ತಾಲ್ಲೂಕಿನ, ಚಿಟ್ನಳ್ಳಿ ಗ್ರಾಮದ ಮದನ್ ತಾಯಿ ಜೊತೆ ಚನ್ನಪಟ್ಟಣದಲ್ಲಿ ವಾಸವಿದ್ದ. ಎರಡು ದಿನಗಳಿಂದ ಚಿಕ್ಕಕೊಂಡಗುಳದ ಬಾವನ ಮನೆಗೆ ಬಂದಿದ್ದ ಮದನ್ ಮನೆಯಲ್ಲಿದ್ದ ವೇಳೆ ಮದನ್ಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದ್ದು, ಕುಸಿದು ಬಿದ್ದ ಮದನ್ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾನೆ.