Close Menu
Ain Live News
    Facebook X (Twitter) Instagram YouTube
    Friday, July 4
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಮಳೆಗಾಲದಲ್ಲಿ ಬಟ್ಟೆಗಳನ್ನು ಮನೆಯೊಳಗೆ ಒಣಗಿಸುವುದು ಹೇಗೆ? ಇದನ್ನು ಓದಿ!

    By AIN AuthorJuly 4, 2025
    Share
    Facebook Twitter LinkedIn Pinterest Email
    Demo

    ಬೇಸಿಗೆ ಮುಗಿದು ಮಳೆಗಾಲ ಆರಂಭವಾಗಿದೆ. ಸೆಖೆಯಿಂದ ಎಲ್ಲರಿಗೂ ಬಿಗ್ ರಿಲೀಫ್ ಸಿಕ್ಕಿದೆ. ದೇಶದ ಹಲವೆಡೆ ವರುಣರಾಯ ತನ್ನ ಅಬ್ಬರ ಶುರು ಮಾಡಿದ್ದಾನೆ. ಒಂದೆಡೆ ಈ ಮಳೆ ಎಲ್ಲರಿಗೂ ಸಮಾಧಾನ ನೀಡಿದರೆ, ಮತ್ತೊಂದೆಡೆ ಆತಂಕ ತಂದೊಡ್ಡಿದೆ.

    ಎಲ್ಲಾ ತ್ಯಾಜ್ಯ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಿ: ತುಷಾರ್ ಗಿರಿನಾಥ್

    ಏಕೆಂದರೆ ಮಳೆಗಾಲದಲ್ಲಿ ಜನರನ್ನು ಕಾಡುವ ಸಮಸ್ಯೆ ಎಂದರೆ ಒದ್ದೆ ಬಟ್ಟೆ. ಒದ್ದೆಯಾದ ಬಟ್ಟೆಯನ್ನು ಒಣಗಿಸುವುದೇ ಒಂದು ಹರಸಾಹಸ. ಈಗೀಗ ಹೆಚ್ಚಾಗಿ ಬಿಸಿಲು ಬರದೇ ಒಗೆದು ಒಣಗಾಕಿದ ಬಟ್ಟೆಗಳು ಒಣಗುತ್ತಿಲ್ಲ. ಕೆಲವೊಮ್ಮೆ ದಿನಗಟ್ಟಲೆ ಬಟ್ಟೆ ಒಣಗದೇ ಇದ್ದರೆ, ಅದು ಕೆಟ್ಟ ವಾಸನೆ ಬೀರಲು ಶುರುವಾಗುತ್ತದೆ. ಜೊತೆಗೆ ಕಪ್ಪು ಚುಕ್ಕೆ ಮೂಡಿ ನಿರರ್ಥಕಗೊಳ್ಳುತ್ತವೆ.

    ಮಳೆಗಾಲದಲ್ಲಿ ಒದ್ದೆಯಾದ ಬಟ್ಟೆಗಳನ್ನು ಇಟ್ಟುಕೊಳ್ಳಲು ಮತ್ತು ಒಣಗಿಸಲು ಸಾಧ್ಯವಾಗದೆ ಮಹಿಳೆಯರು ತೊಂದರೆ ಎದುರಿಸುತ್ತಾರೆ. ಇದರಿಂದ ಮಳೆಗಾಲದಲ್ಲಿ ಮನೆ ತುಂಬಾ ಒಗೆದ, ಒದ್ದೆ ಬಟ್ಟೆಗಳೇ ನೇತಾಡುತ್ತಾ ಇರುತ್ತವೆ, ದಿನಗಳೇ ಕಳೆದರೂ ಬಟ್ಟೆ ಒಣಗುವುದಿಲ್ಲ. ಒದ್ದೆ ಬಟ್ಟೆಯನ್ನು ಹಾಗೆಯೇ ಧರಿಸಿದರೆ ವಾಸನೆ, ಚರ್ಮದ ತುರಿಕೆ, ಗಾಯ ಮತ್ತು ಅಲರ್ಜಿಯಂತಹ ಸಮಸ್ಯೆಗಳು ಅನಿವಾರ್ಯ. ಒಮ್ಮೊಮ್ಮೆ ಬಟ್ಟೆ ಒಣಗದಿದ್ದರೆ ವಾಸನೆಯೂ ಬರುತ್ತದೆ. ಅಂತಹ ವಾಸನೆಯನ್ನು ತೊಡೆದುಹಾಕಲು ಇನ್ನೂ ಕಷ್ಟ. ಆದರೆ ಹಳ್ಳಿಗಳಲ್ಲಿ ಕೆಲವರು ತಮ್ಮ ಬಟ್ಟೆಗಳನ್ನು ಸೌದೆ ಒಲೆಯ ಸುತ್ತ ನೇತುಹಾಕುತ್ತಾರೆ. ಅನೇಕ ಸ್ಥಳಗಳಲ್ಲಿ ಡ್ರೈಯರ್ ಅಥವಾ ಸೌದೆ ಒಲೆಗಳಿಲ್ಲ. ಹಾಗಾಗಿ, ಕೆಲವು ಸರಳ ತಂತ್ರಗಳನ್ನು ಬಳಸುವುದರಿಂದ, ಸುಲಭವಾಗಿ ಬಟ್ಟೆಗಳನ್ನು ಒಣಗಿಸಬಹುದು. ಹೀಗೆ ಮಾಡುವುದರಿಂದ ಬಟ್ಟೆಯಿಂದ ವಾಸನೆ ಬರುವುದಿಲ್ಲ.

    ಉಪ್ಪು ತೇವಾಂಶವನ್ನು ಹೀರಿಕೊಳ್ಳುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಮಾನ್ಸೂನ್ ಸಮಯದಲ್ಲಿ ನಿಮ್ಮ ಒಣಗಿಸುವ ಕೋಣೆಯಲ್ಲಿ ಸಮುದ್ರದ ಉಪ್ಪು ಅಥವಾ ಬೆಣಚುಕಲ್ಲುಗಳ ಚೀಲವನ್ನು ಇರಿಸಿ. ಉಪ್ಪು ಕೋಣೆಯಲ್ಲಿ ತೇವಾಂಶವನ್ನು ಹೀರಿಕೊಳ್ಳುತ್ತದೆ ಮತ್ತು ಕೋಣೆಯ ಉಷ್ಣಾಂಶವನ್ನು ಹೆಚ್ಚಿಸುತ್ತದೆ. ಇದರಿಂದ ಬಟ್ಟೆ ಬಹುಬೇಗ ಒಣಗುತ್ತದೆ.

    ನಾವು ಸಾಮಾನ್ಯವಾಗಿ ಬಟ್ಟೆಗಳನ್ನು ಒಣಗಿಸಲು ಮತ್ತು ಸಂಗ್ರಹಿಸಲು ಹ್ಯಾಂಗರ್ ಅನ್ನು ಬಳಸುತ್ತೇವೆ. ಮಳೆಗಾಲದಲ್ಲಿ ಬಟ್ಟೆಗಳನ್ನು ಒಣಗಿಸಲು ಈ ಹ್ಯಾಂಗರ್‌ಗಳು ತುಂಬಾ ಉಪಯುಕ್ತವಾಗಿವೆ. ಹವಾಮಾನ ತಂಪಾಗಿದ್ದರೂ, ಬಟ್ಟೆಗಳು ಗಾಳಿಯಲ್ಲಿ ನೇತಾಡುತ್ತಾ, ಗಾಳಿಗೆ ಆಡುತ್ತಾ ಬೇಗನೆ ಒಣಗಬಹುದು. ಹಾಗಾಗಿ ಮಳೆಗಾಲದಲ್ಲಿ ಹ್ಯಾಂಗರ್ ಬಳಸುವುದು ಉತ್ತಮ.

    ಬಟ್ಟೆಗಳನ್ನು ಬೇಗ ಒಣಗಿಸಲು ಡ್ರೈಯಿಂಗ್ ರೂಮಿನಲ್ಲಿ ಧೂಪವನ್ನು ಹಚ್ಚಿ.

    * ಮಳೆಗಾಲದಲ್ಲಿ ಬಟ್ಟೆ ಒಗೆಯುವ ಯಂತ್ರದಲ್ಲಿ ಒಣಗಿಸಿ. ವೇಗವಾಗಿ ಒಣಗಲು ಗಾಳಿ ಇರುವ ಪ್ರದೇಶದಲ್ಲಿ ಬಟ್ಟೆಗಳನ್ನು ಒಣಗಿಸಿ.

    * ಫ್ಯಾನ್ ಅಡಿಯಲ್ಲಿ ಸ್ವಲ್ಪ ಒದ್ದೆಯಾದ ಬಟ್ಟೆಗಳನ್ನು ಒಣಗಿಸುವುದು ಉತ್ತಮ.

    ಮಳೆಗಾಲದಲ್ಲಿ ಬಟ್ಟೆ ಒಣಗಿಸದಿದ್ದರೆ ದುರ್ವಾಸನೆ ಬರುತ್ತದೆ. ಬಟ್ಟೆಯಿಂದ ಬರುವ ಇಂತಹ ವಾಸನೆಯಿಂದ ನಾವೂ ತೊಂದರೆ ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮಳೆಗಾಲದಲ್ಲಿ ಬಟ್ಟೆ ಸುಗಂಧಭರಿತವಾಗಿರಲು ಹಲವು ಬಗೆಯ ದ್ರವ್ಯ ಪದಾರ್ಥಗಳೂ ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಕೆಲವರಿಗೆ ಇಂತಹ ದ್ರವದ ವಾಸನೆ ಇಷ್ಟವಾಗುವುದಿಲ್ಲ. ಬಟ್ಟೆಯಿಂದ ಕೆಟ್ಟ ವಾಸನೆಯನ್ನು ತೊಡೆದುಹಾಕಲು ಈ ಕೆಲವು ತಂತ್ರಗಳನ್ನು ಬಳಸಬಹುದು.

    ವಿನೆಗರ್, ಅಡುಗೆ ಸೋಡಾ ಬಳಸಿ: ಅಡುಗೆಯಲ್ಲಿ ಬಳಸುವ ಅಡುಗೆ ಸೋಡಾದಿಂದ ಬಟ್ಟೆಯ ವಾಸನೆಯನ್ನು ಹೋಗಲಾಡಿಸಬಹುದು. ನಿಮ್ಮ ಡಿಟರ್ಜೆಂಟ್‌ನಿಂದ ಅಡುಗೆ ಸೋಡಾ ಮತ್ತು ವಿನೆಗರ್ ಮಿಶ್ರಣದಿಂದ ಬಟ್ಟೆ ಒಗೆಯಬಹುದು. ಇದರಿಂದ ಬಟ್ಟೆಗಳನ್ನು ತಾಜಾವಾಗಿರಿಸಬಹುದು.

    ನಿಂಬೆ: ಡಿಟರ್ಜೆಂಟ್‌ಗೆ ನಿಂಬೆ ರಸವನ್ನು ಸೇರಿಸುವುದರಿಂದ ಬಟ್ಟೆ ಕೆಟ್ಟ ವಾಸನೆ ಬರದಂತೆ ನೋಡಿಕೊಳ್ಳಬಹುದು. ನಿಂಬೆ ರಸವು ವಾಸನೆಯನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.

    ಕರ್ಪೂರ: ಬಟ್ಟೆಯ ವಾಸನೆ ಹೋಗಲಾಡಿಸಲು ಮಳೆಗಾಲದಲ್ಲಿ ಬಟ್ಟೆಯ ನಡುವೆ ಕರ್ಪೂರವನ್ನು ಇಡಿ. ಬಟ್ಟೆಯನ್ನು ಒಣಗಿಸಿದ ಸಾಂಬ್ರಾಣಿ ಹೊಗೆಯು ಬಟ್ಟೆಯನ್ನು ಪರಿಮಳಯುಕ್ತವಾಗಿಸುತ್ತದೆ.

    ವೋಡ್ಕಾ: ಹಾಗೆಯೇ ಖಾಲಿ ಸ್ಪ್ರೇ ಬಾಟಲಿಯಲ್ಲಿ ಕುಡಿಯುವ ವೋಡ್ಕಾವನ್ನು ಹಾಕಿ ಬಟ್ಟೆಯ ವಾಸನೆಯನ್ನು ಹೋಗಲಾಡಿಸಲು ಬಟ್ಟೆಯ ಸುತ್ತಲೂ ಸಿಂಪಡಿಸಿ.

    Demo
    Share. Facebook Twitter LinkedIn Email WhatsApp

    Related Posts

    ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ಸೇವಿಸಿದ್ರೆ ಸಾಕು ಸಕ್ಕರೆ ಮಟ್ಟ ಕಂಪ್ಲೀಟ್ ಕಂಟ್ರೋಲ್ ಆಗುತ್ತೆ..!

    July 4, 2025

    ಈ ರೀತಿ ಬೆರೆಸಿ ಕುಡಿದ್ರೆ ಸಾಕು, ಒಂದೇ ವಾರದಲ್ಲಿ 5 ಕೆಜಿಯಷ್ಟು ತೂಕ ಇಳಿಸುತ್ತೆ ಒಂದು ಸ್ಪೂನ್ ತುಪ್ಪ..!

    July 4, 2025

    ಮಹಿಳೆಯರಲ್ಲಿ ಹೃದಯಾಘಾತ ಹೆಚ್ಚಾಗಲು ಕಾರಣ ಈ ಮಾತ್ರೆ ; ಈ ಬಗ್ಗೆ ಇರಲಿ ಎಚ್ಚರ..

    July 3, 2025

    ಪೋಷಕರೇ ನಿಮ್ಮ ಮಗುವಿಗೆ ಈ ಫುಡ್ ಕೊಡ್ತಿದ್ರೆ ಮಿಸ್ ಮಾಡ್ದೇ ಸುದ್ದಿ ಓದಿ!

    July 2, 2025

    ನೀವು ರಕ್ತದಾನ ಮಾಡೋಕು ಮುನ್ನ ಈ ಆಹಾರಗಳನ್ನು ತಪ್ಪದೆ ಸೇವನೆ ಮಾಡಬೇಕು!

    July 2, 2025

    ನಿಮ್ಮ ಮನೆಯಲ್ಲಿ ಹುಣಸೆ ಹಣ್ಣು ಹಾಳಾಗದಂತೆ ಫ್ರೆಶ್‌ ಆಗಿಡಲು ಈ ಟಿಪ್ಸ್ ಫಾಲೋ ಮಾಡಿ!

    July 2, 2025

    ಮಳೆಗಾಲದಲ್ಲಿ ಚಹಾ, ಪಕೋಡಾ ತಿನ್ನುವವರು ಈ ಸುದ್ದಿ ನೋಡಲೇಬೇಕು!

    July 2, 2025

    ಮೆಡಿಕವರ್‌ ಆಸ್ಪತ್ರೆಯಲ್ಲಿ ವಿಜೃಂಭಣೆಯಿಂದ ವೈದ್ಯರ ದಿನಾಚರಣೆ

    July 2, 2025

    Heart Attack: ಹಠಾತ್ ಹಾರ್ಟ್ ಅಟ್ಯಾಕ್ ಆದ್ರೆ ಏನ್ ಮಾಡ್ಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

    July 2, 2025

    Egg Benifis: ನಿತ್ಯ ಎಷ್ಟು ಮೊಟ್ಟೆ ಸೇವಿಸಿದ್ರೆ ಒಳ್ಳೆಯದು? ಇಲ್ಲಿದೆ ವೈದ್ಯರ ಸಲಹೆ!

    July 2, 2025

    ನನ್ನ ಹಾಗೂ ಸಿದ್ದರಾಮಯ್ಯ ಸಂಬಂಧ ಹಾಳು ಮಾಡುವ ಯತ್ನ ನಡೆದಿದೆ; ಬಿಆರ್‌ ಪಾಟೀಲ್!

    July 2, 2025

    ನೀವು ಬೆಳಿಗ್ಗೆ ಎದ್ದಾಕ್ಷಣ.. ಈ ವಸ್ತುಗಳನ್ನು ಅಪ್ಪಿತಪ್ಪಿಯೂ ನೋಡಬಾರದು? ದುರಾದೃಷ್ಟ ನಿಮ್ಮ ಬೆನ್ನೇರಬಹುದು!

    July 2, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.