ಹಾವೇರಿ:- ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ MLC ರವಿಕುಮಾರ್ ನೀಡಿದ ಅವಹೇಳನಕಾರಿ ಹೇಳಿಕೆಗೆ ಸಚಿವ ಹೆಚ್ ಕೆ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಕುಂಬಳಕಾಯಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಕಣ್ಣು, ಚರ್ಮ, ಕೂದಲು ಎಲ್ಲದಕ್ಕೂ ಮದ್ದು!
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡ ರವಿಕುಮಾರ್ ಗೆ ಆತ್ಮಸಾಕ್ಷಿ ಇದ್ದರೆ ಸಾರ್ವಜನಿಕವಾಗಿ ಕ್ಷಮೆ ಕೇಳಲಿ ಎಂದು ಆಗ್ರಹಿಸಿದ್ದಾರೆ.
ಇದು ಆತ್ಯಂತ ದುರ್ದೈವ. ಶಾಸನ ಸಭೆ ಸದಸ್ಯರು, ಬಿಜೆಪಿ ನಾಯಕರು ಹಿರಿಯ ಅಧಿಕಾರಿಯೊಬ್ಬರ ಮೇಲೆ ಲಘುವಾಗಿ ಮಾತಾಡಿರೋದು ನೀಚ ಕೆಲಸ. ಮಹಿಳೆಯರಿಗೆ ಸಣ್ಣ ಅಗೌರವ ಆದರೂ ನಮ್ಮ ಸಮಾಜ ಸಹಿಸಲ್ಲ. ಈ ಲಘುವಾದ , ಅವಮಾನಕರ ಮಾತನ್ನು ನಾವು ತೀವ್ರವಾಗಿ ಖಂಡನೆ ಮಾಡಲೇಬೇಕು. ರವಿ ಕುಮಾರ್ ಅವರಿಗೆ ಆತ್ಮ ಸಾಕ್ಷಿ ಇದ್ದರೆ ಕ್ಷಮೆ ಕೇಳಲಿ. ಅದೂ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಅಪೇಕ್ಷೆ ಪಡುತ್ತೇನೆ. ಇಲ್ಲದಿದ್ದರೆ ಜನರಿಗೆ ಅವಮಾನ ಮಾಡಿದ ಹಾಗೆ ಎಂದರು.