ವಿಜಯನಗರ:- ಮಹಿಳಾ ಅಧಿಕಾರಿಗೆ MLC ರವಿಕುಮಾರ್ ಆ ರೀತಿ ಮಾತಾಡಿದ್ದು ತಪ್ಪು ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಹೈಟೆಕ್ ವೆಶ್ಯಾವಾಟಿಕೆ: ಐವರು ವಿದೇಶಿ ಮಹಿಳೆಯರ ರಕ್ಷಣೆ!
ಶಾಲಿನಿ ರಜನೀಶ್ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಂತೋಷ್ ಲಾಡ್, ಬಿಜೆಪಿ MLC N ರವಿಕುಮಾರ್ ಮಹಿಳಾ ಅಧಿಕಾರಿಗೆ ಹಾಗೆಲ್ಲಾ ಮಾತನಾಡಬಾರದು. ಈ ಹಿಂದೆ ಮಹಿಳಾ ಅಧಿಕಾರಿಯೊಬ್ಬರಿಗೆ ಪಾಕಿಸ್ತಾನದಿಂದ ಬಂದಿದ್ದಾರೆ ಅಂತ ಹೇಳಿದ್ರು. ಈಗ ಸರ್ಕಾರದ ಕಾರ್ಯದರ್ಶಿಗೆ ಈ ರೀತಿಯಲ್ಲಿ ಹೇಳಿದ್ದಾರೆ. ಅದು ಅವರಿಗೆ ಶೋಭೆ ತರೋಲ್ಲಾ. ನಾನು ನಿಮ್ಮ ಮೂಲಕ ರವಿಕುಮಾರ್ ಅವರಿಗೆ ಮನವಿ ಮಾಡುವೆ. ತಾವು ಮತ್ತೊಮ್ಮೆ ಈ ರೀತಿಯಲ್ಲಿ ಮಾತನಾಡಬಾರದು
ನಾವೇಲ್ಲಾ ರಾಜಕೀಯ ಪಕ್ಷದೊಳಗೆ ಇದ್ದೇವೆ. ಕಾಂಗ್ರೆಸ್, ಬಿಜೆಪಿ ಅಂತ ಅಲ್ಲಾ, ಹೀಗೆ ಮಾತಾಡೋರನ್ನ ಸಮಾಜ ಗುರುತಿಸಬೇಕು. ಮಾಧ್ಯಮಗಳು ಕೂಡ ಇಂಥವರಿಗೆ ಪ್ರಚಾರ ಕೊಡಬಾರದು. ಕಾನೂನು ತನ್ನ ಕೆಲಸ ಮಾಡುತ್ತದೆ ಎಂದರು. ಇನ್ನೂ ರಾಜ್ಯದಲ್ಲಿ ಸಿಎಂ ಬದಲಾವಣೆಯಿಲ್ಲ. ನೀವು( ಮಾಧ್ಯಮಗಳನ್ನು ) ಕೇಳೋದು ಬಿಟ್ರೆ ಸರಿಯಿರುತ್ತದೆ . ಈ ಎಲ್ಲಾ ಬೆಳವಣಿಗೆ ಬಳಿಕ ಸುರ್ಜೆವಾಲ ಅವರು ಮಾತನಾಡಿದ್ದಾರೆ. ಅಸಮಾಧಾನಿತ ಶಾಸಕರನ್ನು ಕರೆದು ಮಾತನಾಡಿದ್ದಾರೆ. ದೂರುಗಳಿದ್ವು, ಹೇಳಿದ್ದಾರೆ, ಅವರು ಆಲಿಕೆ ಮಾಡಿಕೊಂಡು ಹೋಗಿದ್ದಾರೆ. ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾವಾದ್ರೂ ಹೇಳ್ತೆವೆ,
ಬಿಜೆಪಿಯವರು ಹೇಳೋಲ್ಲ ಅಲ್ಲಾ-? ಬಿಜೆಪಿಗೆ ಮೋದಿ ಕಂಟಕವಾಗಿದ್ದಾರೆ, ಅವರು ಹೇಳ್ತಿಲ್ಲ. ಗಡ್ಕರಿ ಅವರನ್ನು ಪಿಎಂ ಮಾಡಬೇಕಿ ಅನ್ಮೋದಿದೆ ಆಗ್ತಿಲ್ಲವಲ್ಲ. ಮೋದಿಅವರಿಂದ ದೇಶಕ್ಕೆ ಏನು ಕೊಡುಗೆ ಇದೆ ಹೇಳಿ-? ಮಾಧ್ಯಮ ಪ್ರಚಾರ ಬಿಟ್ರೆ, ಬೇರೆ ಏನಿದೆ ಕೆಲಸ ಹೇಳಿ ನೋಡೋಣ. 29 ಸಾವಿರ ಒಂದು ತೊಲೆ ಇದ್ದಿದ್ದು, 1 ಲಕ್ಷ ಇದೆ ಬಂಗಾರ ದರ . ವಾಲ್ಮೀಕಿ ಹಗರಣದ ಹಣ 90% ವಾಪಾಸ್ ಬಂದಿದೆ ಎಂದು ಹೇಳುವ ಮೂಲಕ ಹಗರಣ ಆಗಿದೆ ಅಂತ ಪರೋಕ್ಷವಾಗಿ ಸಚಿವ ಲಾಡ್ ಒಪ್ಪಿಕೊಂಡರು. ಕಾಂಗ್ರೆಸ್ ಶಾಸಕರು, ಸಂಸದರ ಮನೆ ಮೇಲೆ ಈಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ತನಿಖಾ ಸಂಸ್ಥೆಗಳನ್ನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.. ಈಗಾಗಲೇ ಹಲವು ನಾಯಕರ ಮೇಲೆ ಈಡಿ ದಾಳಿ ನಡೆಸಿ, ತಮ್ಮ ಪಕ್ಷಕ್ಕೆ ಕರೆದುಕೊಂಡಿದ್ದಾರೆ, ಅವರಿಗೆ ಕ್ಲೀನ್ ಚೀಟ್ ಕೂಡ ನೀಡಿದ್ದಾರೆ ಎಂದರು.