ಬೆಂಗಳೂರು: ಚಿನ್ನ ಚೋರಿ ರನ್ಯಾ ರಾವ್‌ಗೆ ಇಡಿ ಮತ್ತೊಂದು ಶಾಕ್ ಕೊಟ್ಟುದೆ.. ಯೆಸ್ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಸಿಲುಕಿ ಪರಪ್ಪನ ಅಗ್ರಹಾರದಲ್ಲಿರುವ ಪಂಜರದ ಗಿಣಿ ರನ್ಯಾ ರಾವ್‌ಗೆ ಸೇರಿದ ಬರೋಬ್ಬರಿ 34 ಕೋಟಿ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿದೆ.
ಹೌದು ಚಿನ್ನ ಕಳ್ಳಸಾಗಾಣಿಕೆ ಪ್ರಕರಣ ಸಂಬಂಧ ರನ್ಯಾ ರಾವ್‌ಗೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ತುಮಕೂರಿನಲ್ಲಿರುವ 34.12 ಕೋಟಿಯನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮುತ್ತಿಗೆ ಹಾಕಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಲೇಔಟ್ ಮನೆ, ಅರ್ಕಾವತಿ ಲೇಔಟ್ ನ ಪ್ಲಾಟ್, ಶಿರಾದ ಇಂಡಸ್ಟ್ರಿಯಲ್ ಲ್ಯಾಂಡ್, ಆನೇಕಲ್ ನ ಕೃಷಿ ಭೂಮಿ ಸೇರಿದಂತೆ 34.12 ಕೋಟಿ ರೂ. ಆಸ್ತಿ ಇದೀಗ ಇಡಿ ವಶಕ್ಕೆ ಸೇರಿದೆ.
ಕುಂಬಳಕಾಯಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಕಣ್ಣು, ಚರ್ಮ, ಕೂದಲು ಎಲ್ಲದಕ್ಕೂ ಮದ್ದು!
ಸದ್ಯ 40 ಕೋಟಿ ಚಿನ್ನ ಸಾಗಣೆ ಮತ್ತು ಹವಾಲ ಪ್ರಕರಣದಲ್ಲಿ ಬಂಧಿತಳಾಗಿರುವ ರನ್ಯಾ ರಾವ್ ಕಳೆದ 4-5 ತಿಂಗಳಿಂದ ಜೈಲು ಹಕ್ಕಿಯಾಗಿದ್ದಾಳೆ.. ತಿಂಗಳಿಗೆ 3-4 ಫಾರಿನ್ ಟ್ರಿಫ್ ಮಾಡ್ತಿದ್ದ ರನ್ಯಾ ಇದೀಗ ಜೈಲಲ್ಲಿ ಮುದ್ದೆ ಮುರಿತಿದ್ದಾಳೆ.. ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಇಡಿ ಇದೀಗ ರನ್ಯಾ ರಾವ್ ಆಸ್ತಿ ಕೂಡ ಇಡಿ ವಶಕ್ಕೆ ಪಡೆದಿದೆ.
ರನ್ಯಾ ರಾವ್‌ರನ್ನು ಮಾರ್ಚ್ 3ರಂದು ದುಬೈನಿಂದ ಬೆಂಗಳೂರಿಗೆ ಹಿಂದಿರುಗುವ ಸಂದರ್ಭ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಡಿಆರ್‌ಐ ಅಧಿಕಾರಿಗಳು ರನ್ಯಾರಿಂದ 14.2 ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿದ್ದರು