ಮಂಡ್ಯ : ಮಗನ ಸಾವಿನಲ್ಲೂ ಕುಟುಂಬವೊಂದು ಸಾರ್ಥಕತೆ ಮೆರೆದಿದೆ. ಅಪಘಾತದಲ್ಲಿ ಬ್ರೈನ್ಡೆಡ್ ಆದ ಮೃತ ಯುವಕನ ಕುಟುಂಬಸ್ಥರು ಅಂಗಾಂಗ ದಾನ ಮಾಡಿದ್ದು, ಮತ್ತಷ್ಟು ಜನರ ಬಾಳಿಗೆ ಬೆಳಕಾಗ ಹೊರಟಿದ್ದಾರೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ನೀತಿಮಂಗಲ ಗ್ರಾಮದ ರಘು (35) ಅಪಘಾತದಲ್ಲಿ ಮೃತಪಟ್ಟಿದ್ದರು. ಜೂನ್ 26 ರಂದು ಮೃತ ರಘು ತನ್ನ ಊರಿನ ರಸ್ತೆ ಬದಿ ಹೋಗಬೇಕಾದರೆ ಹಿಂದೆಯಿಂದ ಬೈಕ್ ಡಿಕ್ಕಿಯಾಗಿತ್ತು. ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟಿನಿಂದ ರಘು ಮೆದುಳು ನಿಷ್ಕ್ರಿಯಗೊಂಡಿತ್ತು. ಹೀಗಾಗಿ ಬ್ರೈನ್ ಡೆಡ್ ಆಗಿರೋ ಬಗ್ಗೆ ವೈದ್ಯರು ಕುಟುಂಬಕ್ಕೆ ಮಾಹಿತಿ ನೀಡಿದ್ದರಿಂದ ಮೆದುಳು ನಿಷ್ಕ್ರಿಯೆ ಯಹಿನ್ನೆಲೆ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ.
ತನ್ನ ಮಗ ಸತ್ತರು 6-7 ಮಂದಿ ಬಾಳಿಗೆ ಆಸರೆಯಾಗಬಹುದೆಂದು ಈ ನಿರ್ಧಾರ ಮಾಡಿದ್ದು, ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಮಾಡಿ ಮಾದರಿಯಾಗಿದ್ದಾರೆ.