ಶಿಸ್ತು ಫಸ್ಟ್..ಸಿನಿಮಾ ನೆಕ್ಸ್ಟ್ ಅನ್ನೋದು ಡಿಬಾಸ್ ಪಾಲಿಸಿ..ಇದನ್ನು ದರ್ಶನ್ ಕೂಡ ತಮ್ಮ ವೃತ್ತಿ ಜೀವನದಲ್ಲಿ ಅನುಸರಿಸಿಕೊಂಡು ಬಂದಿದ್ದಾರೆ. ಅದಕ್ಕೆ ಇವತ್ತು ಈ ಮಟ್ಟಿಗೆ ಡಿಬಾಸ್ ಬೆಳೆದು ನಿಂತಿರೋದು ಅಂದ್ರೆ ತಪ್ಪಾಗಲಿಕ್ಕಿಲ್ಲ. ಒಬ್ಬ ಸೂಪರ್ ಸ್ಟಾರ್ ಆದ್ರೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿರಿಯರಿಗೆ ಹಾಗೂ ಹಿರಿಯರಿಗೆ ಕೊಡಬೇಕಾದ ಗೌರವವನ್ನು ಕೊಡ್ತಾರೆ ಅನ್ನೋದಕ್ಕೆ ಅವ್ರ ಸುತ್ತಮುತ್ತ ಇರುವ ದೊಡ್ಡ ಡಿಪಡೆಯೇ ಸಾಕ್ಷಿ..ಆದ್ರೆ ತಮ್ಮ ಮೇಲಿನ ಅಭಿಮಾನದಿಂದ ಇನ್ನೂ ಏನು ಸಾಧನೆ ಮಾಡದಿರದ ಅಕ್ಕನ ಮಗ ಚಂದುಗೆ ಅಭಿಮಾನಿಯೊಬ್ಬರು ಕಾಲಿಗೆ ಬೀಳುವುದನ್ನು ನೋಡಿ ದರ್ಶನ್ ಮನಸ್ಸಿಗೆ ನೋವು ಮಾಡಿಕೊಂಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಡೆವಿಲ್ ಸಿನಿಮಾದಲ್ಲಿ ಚಂದ್ರುಗೇ ಮೀಸಲಿದ್ದ ಪಾತ್ರದಿಂದ ದಚ್ಚು ಹೊರಗಿಟ್ಟು, ಫ್ಯಾನ್ಸ್ ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಇತ್ತೀಚೆಗೆ ಡೆವಿಲ್ ನಲ್ಲಿ ಮಗನಿಗೆ ಚಾನ್ಸ್ ಕೊಟ್ಟಿದ್ದು, ಭಾರೀ ಚರ್ಚಯಾಗಿತ್ತು. ಇದೀಗ ಗಾಂಧಿನಗರದಲ್ಲಿ ಹೊಸ ವಿಷ್ಯವೊಂದು ಓಡಾಡ್ತಿದೆ. ಅಕ್ಕನ ಮಗನ ಲಾಂಚ್ ಗೆ ಡಿಬಾಸ್ ವೇದಿಕೆ ಸಿದ್ದಪಡಿಸುತ್ತಿದ್ದಾರೆ.
ದರ್ಶನ್ ತಮ್ಮ ಅಕ್ಕನ ಮಗ ಚಂದ್ರು ಅವರನ್ನು ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ತಮ್ಮದೇ ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಅಕ್ಕನ ಮಗನ್ನು ಲಾಂಚ್ ಮಾಡುತ್ತಿದ್ದಾರೆ. ಇನ್ನೊಂದು ಸ್ಪೆಷಲ್ ಏನಪ್ಪ ಅಂದ್ರೆ ಚಂದ್ರುಗೆ ಆಕ್ಷನ್ ಕಟ್ ಹೇಳ್ತಿರೋದು ದಚ್ಚು ಸಹೋದರ ದಿನಕರ್ ತೂಗುದೀಪ. ನವಗ್ರಹ ಹಾಗೂ ಸಾರಥಿ ಸೂತ್ರಧಾರಿ ದಿನಕರ್ ಚಂದ್ರುಗೆ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಸುರೇಶ್ ಬಾಬು ಎಂಬುವವರು ಈ ಸಿನಿಮಾಗೆ ಫಂಡಿಂಗ್ ಮಾಡ್ತಿದ್ದಾರೆ. ಸುರೇಶ್ ಅವರ ಅನನ್ಯ ಹಾಗೂ ಐಶ್ವರ್ಯಾ ಕ್ರಿಯೇಷನ್ ಬ್ಯಾನರ್ ನಡಿ ಈ ಚಿತ್ರ ನಿರ್ಮಾಣವಾಗಲಿದೆ.
ತೂಗುದೀಪ ಬ್ಯಾನರ್ ನಡಿ ತೆರೆಗೆ ಬಂದಿರುವ ನವಗ್ರಹ, ಜೊತೆಜೊತೆಯಲಿ, ಬುಲ್ ಬುಲ್ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿವೆ. ಈ ಬ್ಯಾನರ್ ನಡಿ ನಟಿಸಿದ್ದ ಲವ್ಲಿಸ್ಟಾರ್ ಪ್ರೇಮ್, ರಚಿತಾ ರಾಮ್ ಇಂಡಸ್ಟ್ರೀಯಲ್ಲಿ ತಮ್ಮದೇ ಸ್ಟಾರ್ ಗಿರಿ ಪಡೆದಿದ್ದಾರೆ. ಈಗ ಚಂದ್ರು ಸರದಿ. ಈ ಮೂಲಕ ಚಂದ್ರು ಸಿನಿಮಾ ಕನಸಿಗೆ ಜೊತೆಯಾಗ್ತಿದ್ದಾರೆ ದರ್ಶನ್. ತಮ್ಮ ಸಹೋದರ ದಿನಕರ್ ನಿರ್ದೇಶನದಲ್ಲಿ, ಸೂರಪ್ಪ ಬಾಬು ನಿರ್ಮಾಣದಲ್ಲಿ ಚಂದ್ರು ನಾಯಕನಾಗಿ ನಟಿಸಲಿರುವ ಈ ಚಿತ್ರದಲ್ಲಿ ದರ್ಶನ್ ಸ್ಪೆಷಲ್ ರೋಲ್ ಇರಲಿದೆ ಅನ್ನೋದು ಡಿಪಡೆಗೆ ಖುಷಿ ಸುದ್ದಿಯೇ.ಏನಂತೀರಾ?