ನಟ ಅಜಿತ್ ಕುಮಾರ್ ಅವರಿಗೆ ಕಾರು ಮತ್ತು ಬೈಕ್ ರೇಸ್‌ಗಳೆಂದರೆ ಎಲ್ಲಿಲ್ಲದ ಪ್ರೀತಿ. ಸಿನಿಮಾಗಳ ಜೊತೆ ಜೊತೆಗೆ ಅಜಿತ್ ಕಾರ್ ಮತ್ತು ಬೈಕ್ ರೇಸಿಂಗ್ ಕಡೆ ವಾಲಿದ್ದಾರೆ. ರೇಸಿಂಗ್ ಎಂಬ ಹೆಸರಿನಲ್ಲಿ ತಮ್ಮದೇ ಆದ ಕಾರು ರೇಸಿಂಗ್ ಕಂಪನಿಯನ್ನು ನಟ ಅಜಿತ್ ಹೊಂದಿದ್ದಾರೆ. ಇದೀಗ ಮತ್ತೊಬ್ಬ ಸೌತ್ ಸೂಪರ್ ಸ್ಟಾರ್ ಕಾರ್ ರೇಸಿಂಗ್ ಇಳಿದ್ದಾರೆ. ಅಲ್ಲದೇ ಬೆಂಗಳೂರು ತಂಡವನ್ನು ಖರೀದಿ ಮಾಡಿದ್ದಾರೆ. ಅವ್ರೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್.
ನಟನಾಗಿ, ಗಾಯಕನಾಗಿ, ನಿರೂಪಕನಾಗಿ ಕಿಚ್ಚ ಫೇಮಸ್. ಅಷ್ಟೇ ಅಲ್ಲ ಅದ್ಭುತವಾಗಿ ಅಡುಗೆ ಮಾಡುವ ಕಿಚ್ಚನಿಗೆ ಬೈಕ್ ಕಾರ್ ಕ್ರೇಜ್ ಜೋರಾಗಿದೆ. ಕಿಚ್ಚನ ಪಾರ್ಕಿಂಗ್ ಏರಿಯಾದಲ್ಲಿ ಕೋಟಿ ಕೋಟಿ ಬೆಲೆಯ ಕಾರುಗಳಿವೆ. ಇದೀಗ ಕಿಚ್ಚ ಸುದೀಪ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಕಾರ್ ರೇಸಿಂಗ್ ಫೆಸ್ಟಿವಲ್‌ನಲ್ಲಿ ಬೆಂಗಳೂರು ತಂಡವನ್ನು ಖರೀಸಿದಿದ್ದಾರೆ.
ಕಿಚ್ಚ ಖರೀದಿಸಿದ ತಂಡಕ್ಕೆ ಕಿಚ್ಚಾಸ್ ಕಿಂಗ್ಸ್ ಎಂಬ ಹೆಸರನ್ನು ಇಡಲಾಗಿದೆ. ಬೆಂಗಳೂರು ಟೀಮ್ ಓನರ್ ಆಗಿರುವ ಕಿಚ್ಚ ತಂಡಕ್ಕೆ ಬೆಂಗಳೂರು ಟೀಮ್ ಎಂದೇ ಹೆಸರಿಡುತ್ತಾರೆ ಎಂದು ಸುದೀಪ್ ಭಾವಿಸಿದ್ದರು. ಆದರೆ ಕಿಚ್ಚಾಸ್ ಕಿಂಗ್ಸ್ ಎಂದು ಹೆಸರಿಟ್ಟಿದ್ದಕ್ಕೆ ಸುದೀಪ್ ಖುಷಿಯಾಗಿದ್ದಾರೆ. ಈ ಮೂಲಕ ಸಿನಿಮಾದಾಚೆಯೂ ಕಿಚ್ಚ ಹೆಜ್ಜೆ ಇಟ್ಟಿದ್ದಾರೆ.
ಅಂದಹಾಗೆ ಇಂಡಿಯನ್ ರೇಸ್ ಫೆಸ್ಟಿವಲ್‌ಗೆ ಓನರ್‌ಶಿಪ್ ಆಯ್ಕೆಯನ್ನ ಬಿಡ್ಡಿಂಗ್ ಮೂಲಕವೇ ಆಯ್ಕೆ ಮಾಡಲಾಗುತ್ತದೆ. ಕಾರ್ ರೇಸ್ ಸ್ಪರ್ಧೆಗೆ ಕಿಚ್ಚ ಓನರ್ ಆಗಿರುವ ಕಾರಣ ನಿಮ್ಮ ಇಷ್ಟದ ಕಾರು ಯಾವುದು ಎಂಬ ಪ್ರಶ್ನೆಯನ್ನು ಕೇಳಲಾಯಿತು. ಅದಕ್ಕೆ ಉತ್ತರಿಸಿದ ಸುದೀಪ್ ನನ್ನ ಮೊದಲ ಕಾರ್ ಮಾರುತಿ 800. ಅದೇ ನನ್ನ ಸೂಪರ್ ಕಾರ್ ಎಂದಿದ್ದಾರೆ. ಆಗಸ್ಟ್ ತಿಂಗಳಲ್ಲಿ ರೇಸ್ ಆರಂಭವಾಗಲಿದ್ದು ಬೆಂಗಳೂರು, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಚೆನ್ನೈ, ಗೋವಾ ಫ್ರಾಂಚೈಸಿಗಳ ಮಧ್ಯೆ ಸ್ಪರ್ಧೆ ನಡೆಯಲಿದೆ.
The thrill. The power. The legacy. ⚡
Now taking that legacy to the track.@kichchasudeepa is all set to lead Kichcha’s King Bengaluru into a
blazing new season. 🔥
This is where legacy meets horsepower. 🏆
See you at the Indian Racing Festival 2025#Kichcha'sKingBengaluru pic.twitter.com/iemu0dbPLl— Indian Racing League Official (@Irlofficial1) July 4, 2025