ಬೆಂಗಳೂರು ಗ್ರಾಮಾಂತರ : ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕಚೇರಿಗೆ ಕಂದಾಯ ಅಧಿಕಾರಿಗಳು ದಿಢೀರ್ ಭೇಟಿ ನೀಡಿದ್ದಾರೆ.
ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ಕಂದಾಯ ಇಲಾಖೆಯ ಆಯುಕ್ತರಾದ ಪಿ.ಸುನೀಲ್ ಕುಮಾರ್ ದಿಢೀರ್ ಭೇಟಿ ನೀಡಿ, ದೇವನಹಳ್ಳಿ ರೆಕಾರ್ಡ್ ರೂಂನಲ್ಲಿ ಕುರಿತು ಪರಿಶೀಲನೆ ನಡೆಸಿದ್ದಾರೆ.
ಈ ಹಿಂದೆ ಕಂದಾಯ ಇಲಾಖೆಗೆ ಈ ಭಾಗದ ಜನರಿಂದ ಹೆಚ್ಚಾಗಿ ದೂರುಗಳು ಸಲ್ಲಿಕೆಯಾಗಿದ್ದವು. ದೂರುಗಳು ಹೆಚ್ಚಿದ ಹಿನ್ನೆಲೆ ದೇವನಹಳ್ಳಿ ಅಭಿಲೇಖಾಲಯ ಕಚೇರಿಗೆ ವಿಸಿಟ್ ಮಾಡಿದ ಕಮೀಷನರ್ ಪಿ.ಸುನೀಲ್ ಕುಮಾರ್ ಕಡತಗಳ ಪರಿಶೀಲನೆ ನಡೆಸಿದ್ದಾರೆ. ಆಯುಕ್ತರ ಆಗಮನದ ಹಿನ್ನೆಲೆ ದೇವನಹಳ್ಳಿ ಕಚೇರಿಗೆ ಜಿಲ್ಲಾಧಿಕಾರಿ ಕೂಡ ಭೇಟಿ ನೀಡಿದ್ದಾರೆ.