ಬೆಂಗಳೂರು: ಕಂಠ ಪೂರ್ತಿ ಕುಡಿಸಿ ಸ್ನೇಹಿತರೇ ಸುಲಿಗೆ ಮಾಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬೆಂಗಳೂರು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ. ಪವನ್, ಪ್ರೇಮ್ ಶೆಟ್ಟಿ, ತರುಣ್, ಅಚಲ್ ಬಂಧಿತ ಆರೋಪಿಗಳಾಗಿದ್ದು, ಬಂಧಿತರೆಲ್ಲರೂ ಇಂಜಿನಿಯರಿಂಗ್, ಬಿಕಾಂ ಸ್ಟುಡೆಂಟ್ಸ್ ಆಗಿದ್ದಾರೆ.
ಕಳೆದ ಮೇ 1 ರಂದು ಚಂದನ್ಗೆ ಕರೆ ಮಾಡಿ ಚಿಕ್ಕಜಾಲ ಬಳಿಯ ಪಬ್ಗೆ ಬರುವಂತೆ ಹೇಳಿದ್ದರು. ತಡರಾತ್ರಿ ತನಕ ಅಚಲ್ ಮತ್ತು ಪವನ್, ಚಂದನ್ ಮೂವರು ಪಾರ್ಟಿ ಮಾಡಿದ್ದರು. ನಂತರ ಜಾಲಿ ರೈಡ್ ಹೋಗೋಣ ಅಂತಾ ಚಂದನ್ ಕಾರಿನಲ್ಲೇ ಏರ್ಪೋರ್ಟ್ ಕಡೆಗೆ ಹೊರಟಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಇಬ್ಬರು ಕಾರಿನಲ್ಲಿದ್ದ ಮೂವರ ಮೇಲೂ ಹಲ್ಲೆ ಮಾಡಿ ಚಂದನ್ ಬಳಿಯಿದ್ದ ಮೂರು ಲಕ್ಷ ಮೌಲ್ಯದ ಚಿನ್ನ, ನಗದು ದೋಚಿ ಎಸ್ಕೇಪ್ ಆಗಿದ್ದರು.
ಕುಂಬಳಕಾಯಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಕಣ್ಣು, ಚರ್ಮ, ಕೂದಲು ಎಲ್ಲದಕ್ಕೂ ಮದ್ದು!
ಈ ವೇಳೆ ಜೊತೆಗಿದ್ದ ಅಚಲ್ ಮತ್ತು ಪವನ್ ಪೊಲೀಸರಿಗೆ ದೂರು ನೀಡೋದು ಬೇಡ ಅಂತಾ ಚಂದನ್ಗೆ ಮನವೊಲಿಸಿದ್ದರು. ಇದಾದ ಒಂದು ವಾರದ ನಂತರದ ಘಟನೆ ಬಗ್ಗೆ ಅನುಮಾನಗೊಂಡ ಚಂದನ್ ಪೊಲೀಸರಿಗೆ ದೂರು ನೀಡಿದ್ದ. ತನಿಖೆಯಲ್ಲಿ ಜೊತೆಗಿದ್ದ ಸ್ನೇಹಿತರೇ ಸುಲಿಗೆಕೋರರಿಗೆ ಸುಪಾರಿ ನೀಡಿ ಸುಲಿಗೆ ಮಾಡಿರುವುದು ಗೊತ್ತಾಗಿತ್ತು. ಸದ್ಯ ಪವನ್, ಪ್ರೇಮ್ ಶೆಟ್ಟಿ, ಅಚಲ್, ತರುಣ್ ಎಂಬವರನ್ನು ಬಂಧಿಲಾಗಿದೆ.