ಹಾಸನ : ವಿದ್ಯುತ್ ಸ್ಪರ್ಶಿಸಿ ಸೆಸ್ಕ್ ನೌಕರ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಮೊಸಳೆ ಹೊಸಳ್ಳಿಯಲ್ಲಿ ಘಟನೆ ನಡೆದಿದೆ. ವಿದ್ಯುತ್ ಕಂಬವನ್ನೇರಿ ಲೈನ್ ರಿಪೇರಿ ಮಾಡುತ್ತಿರುವಾಗಲೇ ಲೈನ್ ಮೆನ್ ವರುಣ್(28) ಮೃತಪಟ್ಟಿದ್ದಾನೆ.
ವರುಣ್ ದೇಹದ ಎಡಭಾಗಕ್ಕೆ ಅಚಾನಕ್ಕಾಗಿ ವಿದ್ಯುತ್ ತಂತಿ ಸ್ಪರ್ಶಿಸಿದೆ. ದೇಹದ ಎಡಭಾಗ ಸುಟ್ಟು ಸ್ಥಲದಲ್ಲೇ ಸಾವನ್ನಪ್ಪಿದ್ದಾರೆ. ವರುಣಗೆ ಕಳೆದ ಆರು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು.
ಸದ್ಯ ವರುಣ್ ಮೃತದೇಹ ಹಾಸನದ ಹಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದ್ದು, ಆಸ್ಪತ್ರೆ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.