ಬೆಂಗಳೂರು: ನಕಾರಾತ್ಮಕ ರಾಜಕಾರಣದಿಂದಲೇ ಖರ್ಗೆ ಅವರನ್ನು ದೇಶದ ಜನರು ಮೂರು ಬಾರಿ ತಿರಸ್ಕರಿಸಿದ್ದಾರೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜಗತ್ತಿನ ವೇಗವಾಗಿ ಬೆಳೆಯುತ್ತಿರುವ ಅತಿ ದೊಡ್ಡ ಆರ್ಥಿಕತೆಯ ದೇಶಗಳಲ್ಲಿ ಭಾರತ ಕೂಡ ಒಂದಾಗಿದೆ.
ಎಲ್ಲಾ ದೇಶಗಳು ನಮ್ಮೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಉತ್ಸುಕವಾಗಿವೆ. ಇದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತೊಡಕಾಗುತ್ತಿದೆ. ಖರ್ಗೆ ಅವರ ಹೇಳಿಕೆಯನ್ನು ಖಂಡಿಸುತ್ತೇನೆ. ಇವರ ನಕಾರಾತ್ಮಕ ರಾಜಕಾರಣದಿಂದಲೇ ಅವರನ್ನು ದೇಶದ ಜನರು ಮೂರು ಬಾರಿ ತಿರಸ್ಕರಿಸಿದ್ದಾರೆ ಎಂದರು.
ಕುಂಬಳಕಾಯಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಕಣ್ಣು, ಚರ್ಮ, ಕೂದಲು ಎಲ್ಲದಕ್ಕೂ ಮದ್ದು!
ಯಾವುದೇ ಗಡುವಿನ ಕುರಿತು ಭಾರತ ಮಾತುಕತೆ ನಡೆಸುವುದಿಲ್ಲ. ಆದರೆ, ಬಲದ ಶಕ್ತಿಯ ಮೇಲೆ ಮಾತುಕತೆ ಮಾಡುತ್ತದೆ. ದೇಶದ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಳ್ಳದೇ ಯುಪಿಎ ಮಾತುಕತೆ ಮಾಡಿದಷ್ಟು ನಾವು ದುರ್ಬಲವಲ್ಲ ಎಂದು ಕಿಡಿಕಾರಿದ್ದಾರೆ.