ಬೆಂಗಳೂರು: ಬೆಂಗಳೂರು ಹೊರವಲಯದಲ್ಲಿ ನಡೆಯುತ್ತಿರುವ ರೇವ್ ಪಾರ್ಟಿಗಳು ಇದೀಗ ಪೊಲೀಸ್ ಇಲಾಖೆಯ ಕಣ್ಗಾವಲಿಗೆ ಸಿಕ್ಕಿವೆ. ಪಾರ್ಟಿಗಳ ಹೆಸರಿನಲ್ಲಿ ನಡೆಯುತ್ತಿರುವ ಡ್ರಗ್ಸ್ ಮಾಫಿಯಾಗೆ ಬ್ರೇಕ್ ಹಾಕಲು, ಪೊಲೀಸ್ ಇಲಾಖೆ ಮುಂದಾಗಿದೆ. ಹೌದು ಬೆಂಗಳೂರು ಹೊರವಲಯದಲ್ಲಿ ನಡೆಯುತ್ತಿರುವ ಪಾರ್ಟಿಗಳ ಬಗ್ಗೆ ಇದೀಗ ಶಂಕೆಯ ನೀರಿಕ್ಷೆ ಗಟ್ಟಿಯಾಗುತ್ತಿದೆ.
ರೆಸಾರ್ಟ್, ಹೋಂಸ್ಟೇ, ಹೋಟೆಲ್‌ಗಳು ಹಾಗೂ ಫಾರ್ಮ್ ಹೌಸ್‌ಗಳಲ್ಲಿ ರೇವ್ ಪಾರ್ಟಿಗಳ ಹೆಸರಿನಲ್ಲಿ ಡ್ರಗ್ಸ್ ಸೇವನೆಯಂತೆ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಇದನ್ನು ತಡೆಯಲು, ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜುಲೈ 5ರಂದು ಮಹತ್ವದ ಸಭೆ ನಡೆಯಿತು. ಹೋಂಸ್ಟೇ, ರೆಸಾರ್ಟ್, ಫಾರ್ಮ್ ಹೌಸ್ ಮಾಲೀಕರನ್ನು ಸಭೆಗೆ ಕರೆಯಲಾಗಿತ್ತು.
ಕುಂಬಳಕಾಯಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಕಣ್ಣು, ಚರ್ಮ, ಕೂದಲು ಎಲ್ಲದಕ್ಕೂ ಮದ್ದು!
ಈಶಾನ್ಯ ವಿಭಾಗದ ಡಿಸಿಪಿ ಸಜೀತ್ ಅವರು, “ಪಾರ್ಟಿ ಆಯೋಜಕರ ವಿವರ ಪೊಲೀಸರುಗೂ ತಿಳಿಸಬೇಕು. ಪಾರ್ಟಿಯಲ್ಲಿ ಡ್ರಗ್ಸ್ ಬಳಕೆ ಕಂಡುಬಂದರೆ, ಮಾಲೀಕರೇ ಹೊಣೆಗಾರರು” ಎಂಬ ಖಡಕ್ ಎಚ್ಚರಿಕೆ ನೀಡಿದರು. ಮದುವೆ, ಎಂಗೇಜ್‌ಮೆಂಟ್, ಡೇ ಔಟ್ ಪಾರ್ಟಿಗಳ ನಿಮಿತ್ತ ಹಲವರು ಫಾರ್ಮ್ ಹೌಸ್‌ಗಳನ್ನು ಬಾಡಿಗೆಗೆ ಕೊಡುತ್ತಿದ್ದಾರೆ.ಆದರೆ, ಯಾವುದೇ ಚಟುವಟಿಕೆ ಕಾನೂನುಬಾಹಿರವಾಗಬಾರದು ಎಂಬ ಬಗ್ಗೆಯಲ್ಲಿ ಮಾಲೀಕರಿಗೆ ಸ್ಪಷ್ಟವಾದ ಮಾರ್ಗಸೂಚಿ ನೀಡಲಾಗಿದೆ.
ದೇವನಹಳ್ಳಿ ಭಾಗದಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣದ ಬಳಿಕ, ಪೊಲೀಸರ ದೃಷ್ಟಿ ಇನ್ನೂ ಗಂಭೀರವಾಗಿದೆ.ಪ್ರತಿಯೊಬ್ಬ ಹೋಂಸ್ಟೇ / ರೆಸಾರ್ಟ್ ಮಾಲೀಕರು ಪೊಲೀಸರಿಂದ ಅನುಮತಿ ಪಡೆಯಬೇಕು.ಬಾಡಿಗೆಗೆ ನೀಡಿದ ಪ್ರತಿದಿನದ ಮಾಹಿತಿ ಕೂಡಾ ಪೊಲೀಸರಿಗೆ ನೀಡುವುದು ಕಡ್ಡಾಯ ಎಂದು ಸೂಚನೆ ನೀಡಲಾಗಿದೆ.
ಪೊಲೀಸರು ಎಚ್ಚರಿಕೆ ನೀಡಿದ್ದರೂ, ಕೆಲವರು ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಅನ್ನೋದು ಗಂಭೀರ ವಿಚಾರ.ಹೀಗಾಗಿ ಸಾರ್ವಜನಿಕರ ಜವಾಬ್ದಾರಿ, ಮಾಲೀಕರ ಜವಾಬ್ದಾರಿ ಎರಡೂ ಸಮಾನವಾಗಿ ಇದೆ.ನೀತಿ ನಿಯಮ ಪಾಲನೆ ಮಾಡಿದ್ರೆ… ಪಾರ್ಟಿ ಮಾತ್ರವಲ್ಲ, ನಗರವೂ ಸುರಕ್ಷಿತ