ಹುಬ್ಬಳ್ಳಿ: ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಲಾರಿಯೊಂದು ಧಗಧಗ ಹೊತ್ತಿ ಉರಿದ ಘಟನೆ ಹುಬ್ಬಳ್ಳಿ ಬೈಪಾಸ್ ನೇಕಾರ ನಗತ ಬ್ರಿಡ್ಜ್ ಬಳಿ ತಡರಾತ್ರಿ ನಡೆದಿದೆ.
ಹೌದು,,, ಬೆಳಗಾವಿಯಿಂದ ತಮಿಳುನಾಡು ಕಡೆಗೆ ತೆರಳುತ್ತಿದ್ದ ಲಾರಿಗೆ, ಏಕಾಏಕಿ ಬೆಂಕಿ ಹತ್ತಿಕೊಂಡು ಬೈಪಾಸ್ ರಸ್ತೆಯಲ್ಲೆ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣಹಾನಿಯಾಗಿಲ್ಲ. ಬೆಂಕ ಕಂಡ ತಕ್ಷಣ ಚಾಲಕ ಕೆಳಗೆ ಇಳದಿದ್ದಾನೆ. ಆ ಲಾರಿಯಲ್ಲಿ ಸಕ್ಕರೆ ಲೋಡ್ ಇತ್ತು ಎಂದು ಚಾಲಕನಿಂದ ಮಾಹಿತಿ ತಿಳಿದು ಬಂದಿದೆ. ಸ್ಥಳೀಯ ನಿವಾಸಿಗಳು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ ಕೂಡಲೆ, ಸ್ಥಳಕ್ಕೆ ಬಂದ ಅವರು ಲಾರಿಗೆ ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸಲು ಮುಂದಾದರು.