ಬೆಂಗಳೂರು: ರಾಜ್ಯದಲ್ಲಿ ಹೃದಯಾಘಾತದಿಂದ ಯುವ ಜೀವಗಳು ನಸುಕಿನ ಹೊತ್ತಲ್ಲೇ ಕಳೆದುಕೊಳ್ಳುತ್ತಿರುವ ದುಃಖದ ಘಟನೆಗಳು ಚಿಂತೆಗೆ ಕಾರಣವಾಗಿವೆ. ಮೈಸೂರು ಮತ್ತು ಚಿಕ್ಕಮಗಳೂರಿನಲ್ಲಿ ವರದಿಾದ ಎರಡು ಪ್ರತ್ಯೇಕ ಪ್ರಕರಣಗಳು ವರದಿಯಾಗಿದೆ.
ಕುಂಬಳಕಾಯಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಕಣ್ಣು, ಚರ್ಮ, ಕೂದಲು ಎಲ್ಲದಕ್ಕೂ ಮದ್ದು!
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕೂಡ್ಲುರು ಗ್ರಾಮದಲ್ಲಿ, 35 ವರ್ಷದ ಪುರುಷೋತ್ತಮ್ ಎಂಬವರು ಬೆಳಗಿನ ಜಾವ ಮುಖ ತೊಳೆಯುವಾಗಲೇ ಹೃದಯಾಘಾತಕ್ಕೊಳಗಾದ್ರು. ಕುಟುಂಬದವರು ತಕ್ಷಣ ಚಿಕಿತ್ಸೆಗಾಗಿ ಪ್ರಯತ್ನಿಸಿದ್ರು, ಆದರೆ ಅಷ್ಟರಲ್ಲೇ ಅವರ ಉಸಿರು ನಿಂತುಬಿಟ್ಟಿತ್ತು. ಕುಟುಂಬವನ್ನೇ ಆಘಾತದ ಮೌನದಲ್ಲಿ ನುಗ್ಗಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರೀಬೈಲು ಗ್ರಾಮದಲ್ಲಿ, 29 ವರ್ಷದ ಮೀನಾಕ್ಷಿ ಎಂಬ ಯುವತಿಯು ಎದೆ ಉರಿಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.ಮಳೆಯಿಂದ ರಸ್ತೆಗೆ ಮರ ಬಿದ್ದು ವಾಹನ ತಡವಾಗಿ ಆಸ್ಪತ್ರೆಗೆ ತಲುಪಿದೆ.ಅಷ್ಟರಲ್ಲಿ ಹೃದಯಾಘಾತ ಸಂಭವಿಸಿ ಮೀನಾಕ್ಷಿ ಸಾವಿಗೀಡಾದ್ರು. ಈ ಘಟನೆ ರಾಜ್ಯದ ಗ್ರಾಮೀಣ ಭಾಗದ ಮೂಲ ಸೌಕರ್ಯಗಳ ಕೊರತೆಯನ್ನೂ ತೋರಿಸುತ್ತದೆ.
ಹೃದಯಾಘಾತದ ಲಕ್ಷಣಗಳನ್ನು ಓದುತ್ತಲೇ ಮೌನವಾಗಿ ಕೈಕಟ್ಟಿ ಕುಳಿತಿರುವ ಸಮಾಜಕ್ಕೆ – ಈ ಘಟನೆಗಳು ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸುತ್ತವೆ. ಎದೆ ಉರಿ, ಉಸಿರಾಟ ತೊಂದರೆ, ಬೆವರಿಡುವುದು, ತೀವ್ರ ನರಳಾಟ, ಇವೆಲ್ಲಾ ಇಂಗಿತಗಳನ್ನು ಗಂಭೀರವಾಗಿ ಪರಿಗಣಿಸಬೇಕು.