ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೃದಯಾಘಾತದ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಬಾರಿ ಮೂಡಿಗೆರೆ ತಾಲೂಕಿನ ಬಿ.ಹೊಸಳ್ಳಿ ಗ್ರಾಮದಲ್ಲಿ 75 ವರ್ಷದ ಸುಮಿತ್ರೆಗೌಡ ಎಂಬ ವೃದ್ಧರು ಪ್ರಾಣ ಕಳೆದುಕೊಂಡಿದ್ದಾರೆ. ಮನೆಯಲ್ಲೇ ಇದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಅವರು ತಕ್ಷಣವೇ ಕೊನೆಯುಸಿರೆಳೆದಿದ್ದಾರೆ. ಊಹಿಸಲಾಗದ ಈ ಘಟನೆ ಕುಟುಂಬದವರನ್ನು ಆಘಾತಕ್ಕೀಡುಮಾಡಿದೆ.
ಕುಂಬಳಕಾಯಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಕಣ್ಣು, ಚರ್ಮ, ಕೂದಲು ಎಲ್ಲದಕ್ಕೂ ಮದ್ದು!
ಇತ್ತೀಚಿನವರೆಗೆ ಹೃದಯಾಘಾತದ ಪ್ರಕರಣಗಳು ಮುಖ್ಯವಾಗಿ ಯುವಜನರಲ್ಲಿಯೇ ಕಾಣಿಸಿಕೊಂಡಿದ್ದರೂ, ಈಗ ಹಿರಿಯ ನಾಗರಿಕರಲ್ಲಿಯೂ ಇದರ ಪ್ರಮಾಣದ ಏರಿಕೆ ಚಿಂತೆ ಮೂಡಿಸಿದೆ.
ಸುಮಿತ್ರೆಗೌಡರ ಸಾವಿನ ಹಿನ್ನೆಲೆಯಲ್ಲಿ, ವಯಸ್ಸಾದವರು ಕೂಡ ಹೃದಯ ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡದೆ, ಸಮಯಕ್ಕೆ ಸರಿಯಾದ ತಪಾಸಣೆ ಹಾಗೂ ನಿತ್ಯದ ಆರೋಗ್ಯ ಕಾಳಜಿಗೆ ಹೆಚ್ಚಿನ ಗಮನ ನೀಡಬೇಕೆಂಬ ಸಂದೇಶ ಈ ಘಟನೆ ನೀಡುತ್ತಿದೆ.
ಈ ಮಧ್ಯೆ, ಚಿಕ್ಕಮಗಳೂರು, ಹಾಸನ ಸೇರಿದಂತೆ ಮಲೆನಾಡು ಭಾಗದಲ್ಲಿ ಹೃದಯಾಘಾತದ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಉಲ್ಬಣಗೊಂಡಿರುವುದು ಆರೋಗ್ಯ ಇಲಾಖೆಗೂ ತಲೆನೋವಾಗಿ ಪರಿಣಮಿಸಿದೆ.