ಬೆಳಗಾವಿ: KSRTC ಬಸ್ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತರಾದರು. ಅವರೆಲ್ಲರೂ ಅಪ್ಜಲಪುರ ಮೂಲದವರು ಎಂದು ಪತ್ತೆಯಾಗಿದೆ ಅಪಘಾತದ ಶಬ್ದ ಕೇಳಿದ ಸ್ಥಳೀಯರು ಓಡಿಬಂದು ಕಾರಿನಲ್ಲಿದ್ದವರನ್ನು ಹೊರತೆಗೆದು ರಕ್ಷಿಸಲು ಯತ್ನಿಸಿದರು.
ಕುಂಬಳಕಾಯಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಕಣ್ಣು, ಚರ್ಮ, ಕೂದಲು ಎಲ್ಲದಕ್ಕೂ ಮದ್ದು!
ಆದರೆ, ಅವರು ಸ್ಥಳದಲ್ಲೇ ಮೃತಪಟ್ಟಿದ್ದರು ಎಂಬುದು ದೃಢವಾಗಿದೆ. ಅಥಣಿ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಪ್ರಾರಂಭವಾಗಿದೆ. ಜೀವ ನಾಳೆ ಎಂಥದು ಅನ್ನೋದು ಯಾರಿಗೂ ಗೊತ್ತಿಲ್ಲ. ಆದರೆ ಚಲಿಸುವಾಗ ಎಚ್ಚರಿಕೆಯಿಂದಿದ್ದರೆ, ಇಂತಹ ಮೌನ ದುರಂತಗಳು ತಪ್ಪಿಸಬಹುದಿತ್ತು