ಬೆಂಗಳೂರು: ನಗರದ ಪುಟ್ಟೇನಹಳ್ಳಿಯಲ್ಲಿ ಭಾರೀ ಹಣದ ವಂಚನೆ ಬೆಳಕಿಗೆ ಬಂದಿದೆ. ಸುಧಾ ಮತ್ತು ಸಿದ್ದಾಚಾರಿ ಎಂಬ ದಂಪತಿ, ಸುಮಾರು 20 ವರ್ಷಗಳಿಂದ ಚೀಟಿ ಹಣ ವ್ಯವಹಾರ ನಡೆಸುತ್ತಿದ್ದರು. ಜನರು ನೆಚ್ಚಿ ನಂಬಿದ್ದ ಈ ದಂಪತಿ, ಇದೀಗ 600ಕ್ಕೂ ಹೆಚ್ಚು ಸದಸ್ಯರಿಂದ ಸುಮಾರು ₹40 ಕೋಟಿ ರೂಪಾಯಿ ಹಣ ಪಡೆದು ಪರಾರಿಯಾಗಿದ್ದಾರೆ.
ಕುಂಬಳಕಾಯಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಕಣ್ಣು, ಚರ್ಮ, ಕೂದಲು ಎಲ್ಲದಕ್ಕೂ ಮದ್ದು!
ದಂಪತಿಯೊಬ್ಬರು ತಮ್ಮ ಮನೆಗೆ ಬೀಗ ಹಾಕಿ, ಇಬ್ಬರು ಮಕ್ಕಳೊಂದಿಗೆ ಜೂನ್ 3ರ ರಾತ್ರಿ ನಾಪತ್ತೆಯಾಗಿದ್ದಾರೆ. ಹಣ ವಾಪಸ್ ಪಡೆಯಲು ಜನರು ಕಾಯುತ್ತಿದ್ದಾಗ, ಅವರು ಬ್ಯಾಂಕ್ನಲ್ಲಿ ಇದ್ದ ಚಿನ್ನವನ್ನೂ ತೆಗದು, ಮೊಬೈಲ್ ನಿಷ್ಕ್ರಿಯಗೊಳಿಸಿ, ಮನೆ ಬಿಟ್ಟು ಓಡಿದ್ದಾರೆ.
ಮನೆಯಲ್ಲಿದ್ದ ಮೊಬೈಲ್ ಬಿಟ್ಟು, ಉಳಿದ ಎಲ್ಲಾ ಮಾಲು-ಸಾಮಾನುಗಳನ್ನೂ ಅವರ ಜೊತೆ ತೆಗೆದುಕೊಂಡಿದ್ದಾರೆ. ಈ ಪ್ರಕರಣವನ್ನು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಪೊಲೀಸರು ಈಗಾಗಲೇ ಮೂರು ವಿಶೇಷ ತಂಡಗಳನ್ನು ರಚಿಸಿ, ಸುಧಾ ಮತ್ತು ಸಿದ್ದಾಚಾರಿಯನ್ನು ಪತ್ತೆಹಚ್ಚಲು ಶೋಧ ಕಾರ್ಯ ಆರಂಭಿಸಿದ್ದಾರೆ.
ಇನ್ನೂ ವಂಚನೆಗೊಳಗಾದವರು, ಈಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಗೃಹ ಸಚಿವ ಜಿ. ಪರಮೇಶ್ವರ್ ಅವರ ಮೊರೆ ಹೋಗಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಹಿಡಿದು ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.