ತುಮಕೂರು: ತುಮಕೂರು ಹೊರವಲಯದ ಅಂತರಸನಹಳ್ಳಿಯಲ್ಲಿ ಪತಿಯೊಬ್ಬನು ಪತ್ನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬಹಿರಂಗವಾಗಿದೆ. ಕೊಲೆಯಾಗಿ ಸಾವಿಗೀಡಾದ ಗೀತಾ (20) ಎಂಬ ಯುವತಿಯ ಪತಿ ನವೀನ್ ಎಂಬಾತ ಈ ಕೃತ್ಯಕ್ಕೆ ಮುಂದಾಗಿದ್ದು, ಪ್ರಕರಣವು ಸ್ಥಳೀಯವಾಗಿ ಭಾರೀ ಭಾರೀ ಚರ್ಚೆಗೆ ಕಾರಣವಾಗಿದೆ.
ಕುಂಬಳಕಾಯಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಕಣ್ಣು, ಚರ್ಮ, ಕೂದಲು ಎಲ್ಲದಕ್ಕೂ ಮದ್ದು!
ನವೀನ್ ಮತ್ತು ಗೀತಾ ಎಂಬ ದಂಪತಿ ಕಳೆದ ಎರಡು ವರ್ಷಗಳಿಂದ ಅಂತರಸನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ನವೀನ್ ಅಲ್ಲಿ ಎಪಿಎಂಸಿ ಮಾರುಕಟ್ಟೆಯ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಇವರಿಗೆ ಒಂದು ವರ್ಷದ ಗಂಡು ಮಗು ಕೂಡಾ ಇದೆ. ಇತ್ತೀಚೆಗೆ ಗೀತಾ ಮಗುವನ್ನು ತನ್ನ ತವರು ಮನೆಗೆ ಕಳುಹಿಸಿದ್ದಳು. ಜುಲೈ 5ರ ರಾತ್ರಿ ದಂಪತಿಯ ನಡುವೆ ತೀವ್ರ ವಾಗ್ವಾದ ಉಂಟಾಗಿದ್ದು, ಆ ಕೋಪದಲ್ಲಿ ನವೀನ್ ಪತ್ನಿಗೆ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ರವಿವಾರ (ಜುಲೈ 6) ಬೆಳಿಗ್ಗೆ ಬಾಡಿಗೆ ಸಂಗ್ರಹಿಸಲು ಬಂದ ಮನೆ ಮಾಲೀಕರು ಗೀತಾ ರಕ್ತದಲ್ಲಿ ಬಿದ್ದಿರುವ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ FIR ದಾಖಲಾಗಿದೆ.