ಪರಂಗಿ ಅಥವಾ ಪಪ್ಪಾಯಿ ಹಣ್ಣು ತನ್ನಲ್ಲಿ ಅತಿ ಹೆಚ್ಚು ನೈಸರ್ಗಿಕವಾದ ಸಿಹಿ ಅಂಶವನ್ನು ಒಳಗೊಂಡ ಹಣ್ಣಾಗಿದೆ. ಅಷ್ಟೇ ಪ್ರಮಾಣದ ಆರೋಗ್ಯದ ಲಾಭಗಳನ್ನು ಒಳಗೊಂಡಿರುವ ಪರಂಗಿ ಹಣ್ಣನ್ನು ಮಕ್ಕಳು ದೊಡ್ಡವರು ಮತ್ತು ವಯಸ್ಸಾದವರು ಯಾವುದೇ ಹಿಂಜರಿಕೆಯಿಲ್ಲದೆ ಸೇವನೆ ಮಾಡಬಹುದು.
ಪರಂಗಿ ಹಣ್ಣಿನ ಸೇವನೆಯಿಂದ ಉಂಟಾಗುವ ಆರೋಗ್ಯದ ಲಾಭಗಳು ಒಂದೆರಡಲ್ಲ. ಮಹಿಳೆಯರಿಗೂ ಕೂಡ ಪರಂಗಿ ಹಣ್ಣಿನಿಂದ ಸಾಕಷ್ಟು ಪ್ರಯೋಜನಗಳಿವೆ. ಹಲವಾರು ರೀತಿಯಲ್ಲಿ ಪರಂಗಿ ಹಣ್ಣಿನ ಉಪಯೋಗಗಳನ್ನು ನಿರೀಕ್ಷೆ ಮಾಡಬಹುದು.
ಎಲ್ಲಾ ಋತುಗಳು ಬಹಳ ಸುಲಭವಾಗಿ ಲಭ್ಯವಿರುವ ಹಣ್ಣುಗಳಲ್ಲಿ ಪರಂಗಿಹಣ್ಣು ಕೂಡ ಒಂದು. ಪರಂಗಿ ಹಣ್ಣಿನ ಸೇವನೆಯು ಉದರ ಸಂಬಂಧಿತ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವುದರ ಜೊತೆಗೆ ತೂಕ ಇಳಿಕೆಯಲ್ಲಿಯೂ ಪರಿಣಾಮಕಾರಿ ಆಗಿದೆ. ಇದಲ್ಲದೆ, ಪರಂಗಿ ಹಣ್ಣಿನ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದರಿಂದ ಇದು ನಮ್ಮನ್ನು ಹಲವು ಆರೋಗ್ಯ ಸಮಸ್ಯೆಗಳಿಂದಲೂ ದೂರ ಉಳಿಯುವಂತೆ ಮಾಡುತ್ತದೆ. ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಪರಂಗಿ ಹಣ್ಣು ಕೆಲವರಿಗೆ ಬಹಳ ಅಪಾಯಕಾರಿ ಎಂದು ಸಾಬೀತು ಪಡಿಸಬಹುದು. ಅದರಲ್ಲೂ ನಾಲ್ಕು ಸಂದರ್ಭಗಳಲ್ಲಿ ಅಪ್ಪಿತಪ್ಪಿಯೂ ಪರಂಗಿ ಹಣ್ಣನ್ನು ತಿನ್ನಲೇಬಾರದು ಎಂದು ಹೇಳಲಾಗುತ್ತದೆ.
ಗರ್ಭಿಣಿಯರು:
ಮೆಗ್ನೀಸಿಯಮ್, ಫೈಬರ್, ವಿಟಮಿನ್ಸ್, ಫೈಬರ್ ನಂತಹ ಅನೇಕ ಪೋಷಕಾಂಶಗಳ ಆಗರವಾಗಿರುವ ಪರಂಗಿಹಣ್ಣು ಆರೋಗ್ಯಕ್ಕೆ ಅತ್ಯುತ್ತಮವಾದರೂ ಕೂಡ, ಗರ್ಭಿಣಿಯರಿಗೆ ಪಪ್ಪಾಯಿ ಸೇವನೆ ಒಳ್ಳೆಯದಲ್ಲ. ಪರಂಗಿಹಣ್ಣಿನಲ್ಲಿ ಕಂಡು ಬರುವ ಪಾಪೈನ್ ದೇಹದಲ್ಲಿನ ಜೀವಕೋಶ ಪೊರೆಯನ್ನು ಹಾನಿಗೊಳಿಸುತ್ತದೆ. ಹಾಗಾಗಿ, ಗರ್ಭಿಣಿಯರು ಅಪ್ಪಿತಪ್ಪಿಯೂ ಪರಂಗಿಹಣ್ಣನ್ನು ತಿನ್ನಲೇಬಾರದು.
ಔಷಧಿ ಸೇವನೆಯ ಮೊದಲು:
ಕೆಲವರು ಪರಂಗಿ ಹಣ್ಣನ್ನು ತಿಂದು ಸ್ವಲ್ಪ ಹೊತ್ತಿನಲ್ಲೇ ಔಷಧಿ ಸೇವಿಸುತ್ತಾರೆ. ಆದರೆ, ಇದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಲಿದೆ. ಪಪ್ಪಾಯಿ ಮತ್ತು ಔಷಧಿಗಳ ಕಾಕ್ಟೈಲ್ ದೇಹದಲ್ಲಿ ರಕ್ತವನ್ನು ತೆಳುವಾಗಿಸುತ್ತದೆ. ಹಾಗಾಗಿ, ಇವುಗಳನ್ನು ಒಟ್ಟಿಗೆ ಸೇವಿಸುವುದರಿಂದ ದೇಹದಿಂದ ರಕ್ತಸ್ರಾವವಾಗುವ ಅಪಾಯ ಹೆಚ್ಚು ಎಂದು ಹೇಳಲಾಗುತದೆ.
ಸ್ಕಿನ್ ಅಲರ್ಜಿ:
ಕೆಲವರಿಗೆ ಪರಂಗಿ ಹಣ್ಣಿನ ಸೇವನೆಯಿಂದ ಚರ್ಮದ ಅಲರ್ಜಿ ಕಾಣಿಸಿಕೊಳ್ಳುತ್ತದೆ. ಇದಲ್ಲದೆ, ಪರಂಗಿ ಹಣ್ಣಿನ ಸೇವನೆಯಿಂದ ಕೆಲವರಲ್ಲಿ ಕೆಂಪು ದದ್ದುಗಳು, ತಲೆನೋವು, ತಲೆತಿರುಗುವಿಕೆ ಮತ್ತು ಊತ ಉಂಟಾಗುತ್ತದೆ. ಇಂತಹವರು ಕೂಡ ಪರಂಗಿ ಹಣ್ಣನ್ನು ತಿನ್ನಬಾರದು.
ಲೋ ಶುಗರ್:
ಲೋ ಶುಗರ್ ಸಮಸ್ಯೆ ಇರುವವರಿಗೂ ಕೂಡ ಪರಂಗಿ ಹಣ್ಣಿನ ಸೇವನೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು. ವಾಸ್ತವವಾಗಿ, ಮಧುಮೇಹ ಸಮಸ್ಯೆ ಇರುವವರಿಗೆ ಬ್ಲಡ್ ಶುಗರ್ ಲೆವೆಲ್ ಅನ್ನು ನಿಯಂತ್ರಿಸಲು ಪರಂಗಿಹಣ್ಣನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ. ಆದರೆ, ಲೋ ಶುಗರ್ ಸಮಸ್ಯೆ ಇರುವವರು ಪರಂಗಿ ಸೇವಿಸುವುದರಿಂದ ಇದು ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಹುದು.