ಇಂಟರ್ನೆಟ್ ಯುಗದಲ್ಲಿ ಮೊಬೈಲ್ ಫೋನ್ ಎನ್ನುವುದು ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದ್ದು, ಪ್ರತಿಯೊಂದಕ್ಕೂ ಇದು ಅನಿವಾರ್ಯವೆನ್ನುವಂತಾಗಿದೆ. ಶಾಲಾ ಚಟುವಟಿಕೆಗಳಿಂದ ಹಿಡಿದು, ಬ್ಯಾಂಕ್, ಸರ್ಕಾರಿ ಕೆಲಸಗಳು ಕೂಡ ಮೊಬೈಲ್ ನಲ್ಲೇ ಮಾಡಿಕೊಳ್ಳಬಹುದಾಗಿದೆ.
ನಾನೊಬ್ಬ ಸ್ವಾಭಿಮಾನಿ.. ದುರಹಂಕಾರಿ ಅಂದ್ರೂ ಡೋಂಟ್ ಕೇರ್: ಸಿದ್ದರಾಮಯ್ಯ!
ಆದರೆ ಜನರು ಮೊಬೈಲ್ ಚಟವನ್ನು ಅಂಟಿಸಿಕೊಂಡಿರುವುದು ತುಂಬಾ ಆಘಾತಕಾರಿಯಾಗುತ್ತಿದ್ದು, ಇದರಿಂದಾಗಿ ಹಲವಾರು ರೀತಿಯ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡುತ್ತಲಿದೆ.
ಬಹುತೇಕ ಹೆಚ್ಚಿನವರು ಸ್ಮಾರ್ಟ್ ಫೋನ್‌ಗಳಿಗೆ ದಾಸರಾಗಿ ಹೋಗಿದ್ದಾರೆ. ಹೌದು ದಿನದ ಹೆಚ್ಚಿನ ಸಮಯ ಮೊಬೈಲ್‌ನಲ್ಲಿಯೇ ಕಳೆಯುತ್ತಾರೆ. ಮೊಬೈಲ್ ಇಲ್ಲದೆ ಒಂದು ಕ್ಷಣವೂ ಇರೋಲ್ಲ ಅಂತಾರೆ. ಹೌದು ಬೆಳಗ್ಗೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗುವವರೆಗೂ ಮೊಬೈಲ್‌ನಲ್ಲಿಯೇ ಅತಿ ಹೆಚ್ಚು ಸಮಯ ಕಳೆಯುತ್ತಾರೆ. ಆದ್ರೆ ಹೀಗೆ ಜಾಸ್ತಿ ಹೊತ್ತು ಫೋನ್ ನೋಡುವುದು ಅಷ್ಟು ಒಳ್ಳೆಯದಲ್ಲ. ಇದೇ ರೀತಿ ನೀವು ಕೂಡಾ ಫೋನ್ ಚಟಕ್ಕೆ ಒಳಗಾಗಿದ್ದೀರಾ? ಹಾಗಿದ್ರೆ ಈ ಕೆಲವೊಂದು ಸಲಹೆಗಳನ್ನು ಪಾಲಿಸುವ ಮೂಲಕ ಈ ಚಟದಿಂದ ಹೊರ ಬನ್ನಿ.
ನೋಟಿಫಿಕೇಶನ್ ಆಫ್ ಮಾಡಿ: ಮೊಬೈಲ್‌ನಲ್ಲಿ ಆಗಾಗ್ಗೆ ನೋಟಿಫಿಕೇಶನ್‌ಗಳು ಬರುತ್ತಲೇ ಇರುತ್ತವೆ. ಹೀಗೆ ನೋಟಿಫಿಕೇಶನ್ ಬಂದಾಗ ಬಹುತೇಕ ಎಲ್ಲರೂ ಪದೇ ಪದೇ ಮೊಬೈಲ್ ನೋಡೇ ನೋಡುತ್ತಾರೆ. ಹಾಗಾಗಿ ನೋಟಿಫಿಕೇಶನ್ ಆಫ್ ಮಾಡಿ. ಹೌದು ನೋಟಿಫಿಕೇಶನ್ ಬಂದರೆ ಮೊಬೈಲ್ ಕೂಡಾ ಹೆಚ್ಚು ನೋಡುತ್ತೀರಿ. ಆದ್ದರಿಂದ ಮೊಬೈಲ್ ನೋಟಿಫಿಕೇಶನ್ ಆಫ್ ಮಾಡಿ ಇಟ್ಟುಕೊಳ್ಳಿ.
ಆಪ್ಲಿಕೇಶನ್ ತೆಗೆದು ಹಾಕಿ: ನೀವು ನಿಮ್ಮ ಮೊಬೈಲ್‌ನಲ್ಲಿ ಯಾವ ಆಪ್ಲಿಕೇಶನ್‌ನಲ್ಲಿ ಅತೀ ಹೆಚ್ಚು ಸಮಯವನ್ನು ಕಳೆಯುತ್ತೀರೋ, ಆ ಆಪ್ಲಿಕೇಷನ್‌ನನ್ನು ಡಿಲಿಟ್ ಮಾಡಿ, ಈ ಮೂಲಕ ನೀವು ಮೊಬೈಲ್ ಅತಿ ಹೆಚ್ಚು ಬಳಕೆ ಮಾಡುವುದನ್ನು ಕಡಿಮೆ ಮಾಡಬಹುದು.
ಈ ಸಮಯದಲ್ಲಿ ಫೋನ್ ನೋಡಬೇಡಿ: ಕೆಲವರು ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಮೊಬೈಲ್ ನೋಡ್ತಾರೆ. ನಿಮಗೂ ಇದೇ ಅಭ್ಯಾಸ ಇದ್ದರೆ, ನೀವು ಬೆಳಗ್ಗೆ ಎದ್ದ ತಕ್ಷಣ, ಊಟ ಮಾಡುವ ಸಮಯದಲ್ಲಿ ಮತ್ತು ರಾತ್ರಿ ಮಲಗುವ ಸಮಯದಲ್ಲಿ ಫೋನ್ ನೋಡುವುದನ್ನು ನಿಲ್ಲಿಸಿ.
ಫೋನ್ ದೂರ ಇಟ್ಟುಕೊಳ್ಳಿ: ಮೊಬೈಲ್ ಹತ್ತಿರವಿದ್ದಷ್ಟು ಅದನ್ನು ಹೆಚ್ಚು ನೋಡ್ತೇವೆ. ಹಾಗಾಗಿ ನಿಮ್ಮ ಮೊಬೈಲ್ ಫೋನನ್ನು ಕೈಗೆ ಸಿಗುವ ಹಾಗೆ ಇಡದೆ ನಿಮ್ಮಿಂದ ಸಾಕಷ್ಟು ದೂರದಲ್ಲಿಡಿ. ಹೀಗೆ ಮಾಡುವ ಮೂಲಕ ಮೊಬೈಲ್ ಚಟದಿಂದ ಹೊರ ಬರಬಹುದು.
ಹೊಸ ಅಭ್ಯಾಸಗಳು: ಹೆಚ್ಚಿನವರು ಫ್ರೀ ಟೈಮ್ ಸಿಕ್ಕಾಗ ಮೊಬೈಲ್ ಕೈಯಲ್ಲಿ ಹಿಡಿದುಕೊಂಡು ಟೈಮ್ ಪಾಸ್ ಮಾಡುತ್ತಾರೆ. ಹೀಗೆ ಮಾಡುವ ಬದಲು ಪುಸ್ತಕ ಓದುವಂತಹದ್ದು, ಆಟ ಆಡುವಂತಹದ್ದು, ಡ್ರಾಯಿಂಗ್ ಇತ್ಯಾದಿ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ.