ಮೈಸೂರು:- ನಿಮ್ಮ ಅಪ್ಪ ದೊಡ್ಡ-ದೊಡ್ಡ ನಾಯಕರನ್ನ ಬಲಿ ಕೊಟ್ಟು ನಿನ್ನ ಮಂತ್ರಿ ಮಾಡಿದ್ದಾರೆ ಎಂದು ಹೇಳುವ ಮೂಲಕ ಪ್ರಿಯಾಂಕ ಖರ್ಗೆ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ ಮಾಡಿದ್ದಾರೆ.
ನಿಮ್ಮ ದಾಂಪತ್ಯದಲ್ಲಿ ಅನ್ನೋನ್ಯತೆ ಕಡಿಮೆಯಾಗಿದೆಯ? ಖ್ಯಾತ ಜ್ಯೋತಿಷ್ಯರ ಸಲಹೆ ಪಾಲಿಸಿ!
ಆರ್‌ಎಸ್‌ಎಸ್ ಅನ್ನು ಬ್ಯಾನ್ ಮಾಡಬೇಕು ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ಕುರಿತು ಅವರು ಪ್ರತಿಕ್ರಿಯಿಸಿದರು. ನಿಮ್ಮಪ್ಪ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಕಾಂಗ್ರೆಸ್ ಸಿಎಂ ಮಾಡಲಿಲ್ಲ. ಆರ್‌ಎಸ್‌ಎಸ್ ಬ್ಯಾನ್ ಮಾಡ್ತೀರಾ? ನೀವು ಯಾರ ಮಗ ಎಂದು ಹೆಸರು ಇಟ್ಕೊಂಡಿದ್ದರಲ್ಲ ಅವರ ಕೈಯಲ್ಲೇ ಆಗಿಲ್ಲ. ಅವರು ಬ್ಯಾನ್ ಮಾಡಿದ್ರು, ಬಳಿಕ ಅಧಿಕಾರ ಕಳೆದುಕೊಂಡರು. ನೆಹರೂ ಕೂಡ ಬ್ಯಾನ್ ಮಾಡಿ ನಂತರ ಬ್ಯಾನ್ ವಾಪಸ್ ತೆಗೆದುಕೊಳ್ಳುವ ಅನಿವಾರ್ಯತೆ ಬಂತು. ನೆಹರೂ ಅವರ ಮರಿಮಗಳ ಹೆಸರು ಇಟ್ಕೊಂಡು ಏನು ಮಾಡಲು ಸಾಧ್ಯವಿಲ್ಲ. ಹೆಸರಿನಲ್ಲೂ ಸ್ವಂತಂತೆ ಇಲ್ಲ. ವ್ಯಕ್ತಿತ್ವದಲ್ಲೂ ಸ್ವಂತತೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ
ಐಟಿಬಿಟಿ ಸಚಿವರಾಗಿ ನಿಮ್ಮ ಸಾಧನೆ ಹೇಳಿ. ಬೇರೆ ರಾಜ್ಯಗಳಿಗೆ ಕಂಪನಿಗಳು ಯಾಕೆ ಹೋಗುತ್ತಿದೆ ಹೇಳಿ. ನಿಮ್ಮ ಅಪ್ಪ ದೊಡ್ಡ ದೊಡ್ಡ ನಾಯಕರನ್ನ ಬಲಿ ಕೊಟ್ಟು ನಿಮ್ಮನ್ನ ಮಂತ್ರಿ ಮಾಡಿದ್ದಾರೆ. ಇದೇ ರೀತಿ ಕೂಗು ಮಾರಿ ರೀತಿ ಮಾತನಾಡುತ್ತಿದ್ರೆ, ನಿಮಗೆ ಒಳ್ಳೆಯದು ಆಗಲ್ಲ. ನಿಮ್ಮಪ್ಪನ್ನೇ ಕಾಂಗ್ರೆಸ್ ಸಿಎಂ ಮಾಡಲಿಲ್ಲ. ಇನ್ನೂ ನಿಮ್ಮನ್ನು ಸಿಎಂ ಮಾಡುತ್ತಾ? ಆರ್‌ಎಸ್‌ಎಸ್ ಅನ್ನು ಬೈದ್ರೆ ಅಧಿಕಾರ ಸಿಗಲ್ಲ ಎಂದು ಟೀಕಿಸಿದ್ದಾರೆ.
ಸಚಿವ ಸಂತೋಷ ಲಾಡ್ ಸಹ ಮೇಧಾವಿ ರೀತಿ ಮಾತನಾಡುತ್ತಾರೆ. ಮೋದಿಗೆ ನೀವು ಪಾಠ ಮಾಡುತ್ತೀರಾ? ಈ ದೇಶದ ಅರ್ಥ ವ್ಯವಸ್ಥೆಯನ್ನ ನಿರ್ವಹಣೆ ಮಾಡುವುದು ಸಂಡೂರು ಮೈನ್ಸ್ನಿಂದ ಅದಿರು ಕದ್ದು ಮಾರಾಟ ಮಾಡಿದ್ರಲ್ಲ ಆ ರೀತಿನಾ? ಒಂದು ಪರ್ಮಿಟ್‌ನಲ್ಲಿ 10 ಲಾರಿ ಅದಿರು ಸಾಗಿಸಿ ದುಡ್ಡು ಮಾಡಿದ್ದಂಗೆ ಅಲ್ಲ, ದೇಶದ ಆರ್ಥಿಕತೆ ಎಂದು ಕಿಡಿಕಾರಿದ್ದಾರೆ.
ಲಾಡ್ ಅವರೇ ನಿಮಗೆ ಅರ್ಥ ವ್ಯವಸ್ಥೆಯ ಬಗ್ಗೆ ಕನಿಷ್ಟ ಜ್ಞಾನ ಇಲ್ಲ. ಒಂದು ಲೈಸೆನ್ಸ್ನಲ್ಲಿ ನೂರಾರು ಲಾರಿ ಓಡಿಸಿದ್ರಲ್ಲ, ಆ ರೀತಿ ಅಲ್ಲ ಅಧಿಕಾರ ನಡೆಸುವುದು. ಲಾಡ್ ಅವರೇ ಪ್ರತಿನಿತ್ಯ ಕಾ, ಕಾ ಅಂತೀರಲ್ಲ, ನಿಮ್ಮ ಜಿಲ್ಲೆಯಲ್ಲಿ ಕಾಗೆಗಳು ಇಲ್ಲ. ನಿಮ್ಮ ಜಿಲ್ಲೆಯ ಆಸ್ಪತ್ರೆಯ ಅವ್ಯವಸ್ಥೆಯನ್ನ ನೋಡಿದ್ದೀರಾ ಲಾಡ್ ಅವರೇ? ಮೈನಿಂಗ್ ದುಡ್ಡಿನಲ್ಲಿ ಬಡವರ ಮದ್ವೆ ಮಾಡಿಸಿ ಬಿಟ್ಟರೆ ಅದು ದೊಡ್ಡ ಸಾಧನೆನಾ ಎಂದು ಪ್ರಶ್ನಿಸಿದ್ದಾರೆ.