ಸೋಮವಾರಪೇಟೆ :37 ವರ್ಷ ಸೇನೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಆಲೂರು ಸಿದ್ದಾಪುರದ ಯೋಧನಿಗೆ ಹುಟ್ಟೂರಿನಲ್ಲಿ ಅಭೂತ ಪೂರ್ವ ಸ್ವಾಗತ ದೊರೆಯಿತು.
ಈ ಹಣ್ಣಿಗೆ ಹೃದಯಾಘಾತ ತಡೆಯೋ ಶಕ್ತಿ ಇದೆ.. ವಾರದಲ್ಲಿ ಒಮ್ಮೆಯಾದರೂ ತಪ್ಪದೇ ಸೇವಿಸಿ!
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಆಲೂರುಸಿದ್ದಾಪುರ ಸಮೀಪದ ಮೈಲಾತ್ಪುರ ಗ್ರಾಮದಲ್ಲಿ ಜನಿಸಿ ಕೇಂದ್ರೀಯ ಮೀಸಲು ಪಡೆಯ ಮೂಲಕ ರಾಷ್ಟ್ರ ರಕ್ಷಣೆಗೆ ಸೇರಿ ದೇಶದ ಬಹುತೇಕ ರಾಜ್ಯಗಳಲ್ಲಿ ಸುದೀರ್ಘ 37ವರ್ಷಗಳ ಸೇವೆಯ ನಂತರ ವಯೋಸಹಜ ನಿವೃತ್ತಿ ಪಡೆದು ಸ್ವಗ್ರಾಮಕ್ಕೆ ಆಗಮಿಸಿದ ಮಂಜುನಾಥ್ ರವರಿಗೆ ಗ್ರಾಮಸ್ಥರು ಹಾಗೂ ಕುಟುಂಬಸ್ಥರಿಂದ ಅಭೂತಪೂರ್ವ ಸ್ವಾಗತ ಕೋರಿದರು.ಇವರೊಂದಿಗೆ ಇವರ ಅಕ್ಕ ಪಕ್ಕದ ಗ್ರಾಮದ ನಿವೃತ್ತ ಯೋಧರಿಗೂ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಯೋಧ ಮಂಜುನಾಥ್ ರಾಷ್ಟ್ರ ರಕ್ಷಣೆಯ ಸೇವೆ ಎಲ್ಲಾರಿಗೂ ಸಿಗುವಂತಹುದಲ್ಲಾ ಆದರೆ ನನಗೆ ಅಂತಹ ಅವಕಾಶ ಸಿಕ್ಕಿತ್ತು ಭಾರತಾಂಬೆಯ ಸೇವೆ ಮಾಡಿದ ಸಾರ್ಥಕತೆ ನನಗಿದೆ ಅದು ಹೆಮ್ಮೆ ಎಂದರು.