ಬೆಂಗಳೂರು:- ನೀವು ರಸ್ತೆಯಲ್ಲಿಯೇ ನಿಂತಿರುವಾಗಲೇ ಆಗಲಿ, ಅಥವಾ ಬಸ್ ನಲ್ಲಿ ಹೋಗುತ್ತಿರುವಾಗಲೇ ಆಗಲಿ, ಅಪರಿಚಿತರು ಫೋನ್ ಮಾಡೋಕೆ ಮೊಬೈಲ್ ಕೇಳಿದ್ರೆ ಸ್ವಲ್ಪ ಹುಷಾರಾಗಿರಿ.
ಕೂದಲಿನ ಕ್ಲಿಪ್ ಹಾಗೂ ಚಾಕುವಿನಿಂದ ಹೆರಿಗೆ: ತಾಯಿ-ಮಗುವನ್ನು ರಕ್ಷಿಸಿದ ಸೇನಾ ವೈದ್ಯ!
ಫೋನ್ ಮಾಡಲು ಕೊಟ್ಟ ಮೊಬೈಲ್ ವಾಪಾಸ್ ಕೇಳಿದ್ರೆ ಲಾಂಗ್ ಎತ್ತಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ. ಎಸ್, ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಟ್ಟಾಳಮ್ಮ ದೇವಸ್ಥಾನ ರಸ್ತೆಯ ಪಕ್ಕದಲ್ಲಿ ಒಂದು ಕಟ್ಟಡ ನಿರ್ಮಾಣವಾಗ್ತಿತ್ತು..ಇಲ್ಲಿ ಮಿಥುನ್ ಕುಮಾರ್ ಅವರು, ಬಿಲ್ಡಿಂಗ್ ಇಂಜಿನಿಯರಿಂಗ್ ಕೆಲಸ ಮಾಡ್ತಿದ್ದರು. ಅದರಂತೆ ಕಳೆದ 03 ರಂದು ಬೆಳಗ್ಗೆ 10 ಗಂಟೆಗೆ ರಸ್ತೆ ಬಳಿ ಇದ್ದ.
ಈ ವೇಳೆ ಬ್ಲ್ಯಾಕ್ ಶರ್ಟ್ ಧರಿಸಿದ್ದ ವ್ಯಕ್ತಿ ರಾಂಗ್ ರೂಟ್ ನಲ್ಲಿ ಬಳಿ ಬಂದಿದ್ದ. ನನ್ನ ಮೊಬೈಲ್ ಹಾಳಗಿದೆ ಫೋನ್ ಮಾಡಬೇಕೆಂದು ಮೊಬೈಲ್ ಕೇಳಿದ್ದ. ಈ ವೇಳೆ ಮಿಥುನ್ ಮೊಬೈಲ್ ನೀಡಿದ್ದು,ಎರಡು ಬಾರಿ ಆರೋಪಿ ಫೋನ್ ಮಾಡಿದ್ದ. ಮರಳಿ ಫೋನ್ ವಾಪಸ್ ಕೇಳಿದರೆ, ಫೋನ್ ಕೊಡಲು ಆರೋಪಿ ನಿರಾಕರಿಸಿದ್ದಾನೆ. ಅಲ್ಲದೇ ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಸ್ಟೂಟರ್ ಮ್ಯಾಟ್ ಅಡಿಯಿಂದ ಲಾಂಗ್ ತೆಗೆದಿದ್ದ..ಲಾಂಗ್ ತೆಗೆದವನೇ ಏಕಾಏಕಿ ಮಿಥುನ್ ಕುಮಾರ್ ಮೇಲೆ ಹಲ್ಲೆ,ಮಿಥುನ್ ಕೈಗೆ ಗಾಯ ಮಾಡಿದ್ದಾನೆ.
ಈ ವೇಳೆ ಬಿಡಿಸಲು ಬಂದ ಸೆಕ್ಯೂರಿಟಿ ಗಾರ್ಡ್ ಪರ್ವಿಂದ್ ಗೂ ಮಾರಣಾಂತಿಕ ಹಲ್ಲೆ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಅಸ್ಗರ್ ನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾಗಿದ್ದ ಸೆಕ್ಯೂರಿಟಿ ಗಾರ್ಡ್ ಗೆ ಚಿಕಿತ್ಸೆ ಮುಂದುವರಿದಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.