ಬೆಂಗಳೂರು: ಕೆಐಎಡಿಬಿ ಭೂಸ್ವಾಧೀನದ ವಿರುದ್ಧ ದೇವನಹಳ್ಳಿ ರೈತರ ಪರವಾಗಿ ಹೋರಾಟದ ಮುಂಚೂಣಿಯಲ್ಲಿ ನಿಂತಿರುವ ನಟ ಪ್ರಕಾಶ್ ರಾಜ್, ಸಚಿವ ಎಂಬಿ ಪಾಟೀಲ್ ಅವರ ಟೀಕೆಗೆ ತಿರುಗೇಟು ನೀಡಿದ್ದಾರೆ. ಭಾನುವಾರ ಬಿಡುಗಡೆ ಮಾಡಿದ ವಿಡಿಯೋ ಸಂದೇಶದ ಮೂಲಕ ಸಚಿವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“ನಮಸ್ಕಾರ ಪಾಟೀಲ್ ರೇ, ಇದು ದೇವನಹಳ್ಳಿ ರೈತರ ಸಮಸ್ಯೆ. ಎಲ್ಲೆಲ್ಲೋ ಹೋಗಿ ಹೋರಾಟ ಮಾಡಲಿಕ್ಕೆ ಸಾಧ್ಯವಿಲ್ಲ, ಇಲ್ಲಿ ನಡೆತಿರುವ ಅನ್ಯಾಯವನ್ನ ಇಲ್ಲಿ ನಾವೇ ಪ್ರಶ್ನಿಸಬೇಕು,” ಎಂದು ತಮ್ಮ ವಾದವನ್ನು ನೇರವಾಗಿ ಮಂಡಿಸಿದ ಪ್ರಕಾಶ್ ರಾಜ್.
ಈ ಹಣ್ಣಿಗೆ ಹೃದಯಾಘಾತ ತಡೆಯೋ ಶಕ್ತಿ ಇದೆ.. ವಾರದಲ್ಲಿ ಒಮ್ಮೆಯಾದರೂ ತಪ್ಪದೇ ಸೇವಿಸಿ!
ಸಚಿವ ಎಂಬಿ ಪಾಟೀಲ್ ಅವರು ಈ ಹಿಂದೆ “ಈ ನಟ ತಮಿಳುನಾಡು, ಆಂಧ್ರ, ಗುಜರಾತ್ಗೆ ಹೋಗಿ ಹೋರಾಟ ಮಾಡಲಿ” ಎಂದು ನೀಡಿದ್ದ ಪ್ರತಿಕ್ರಿಯೆ ಬಗ್ಗೆ ಕಿಡಿಕಾರಿದ ಪ್ರಕಾಶ್ ರಾಜ್, “ನಾನು ದೆಹಲಿಯಲ್ಲಿ ತಮಿಳುನಾಡಿನ ರೈತರ ಪರ ಧರಣಿ ಕುಳಿತು ಹೋರಾಟ ಮಾಡಿದ್ದೆ. ಪಂಜಾಬ್ ರೈತರ ಬೆಂಬಲಕ್ಕೂ ನಿಂತಿದ್ದೆ. ನಾವು ಎಲ್ಲ ರಾಜ್ಯಗಳ ಸಮಸ್ಯೆಗಳಲ್ಲೂ ಧ್ವನಿ ಎತ್ತಿದ್ದೇವೆ. ಪ್ರಧಾನಮಂತ್ರಿ ವಿರುದ್ಧವೂ ಧೈರ್ಯವಾಗಿ ಪ್ರಶ್ನೆ ಮಾಡಿದ್ದೇನೆ. ನಾನು ಯಾವ ಪಕ್ಷದವನಲ್ಲ, ಜನರ ಪಕ್ಷದವನು,” ಎಂದು ಜವಾಬು ನೀಡಿದರು.
ಪ್ರಕಾಶ್ ರಾಜ್ ಅವರು ಸಚಿವರನ್ನೇದ್ದೇಶಿಸಿ, “ದೇವನಹಳ್ಳಿ ರೈತರ ಸಮಸ್ಯೆಗೆ ಕಾನೂನುಬದ್ಧ ಪರಿಹಾರ ಹುಡುಕಿ. ಇಲ್ಲದಿದ್ದರೆ ಬನ್ನಿ, ನಮ್ಮ ಜೊತೆ ಮಾತನಾಡಿ. ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ನಮ್ಮಲ್ಲಿದ್ದಾರೆ. ನೀವು ಜನರಿಂದ ಆಯ್ಕೆಯಾದ ಪ್ರತಿನಿಧಿ, ಜವಾಬ್ದಾರಿಯಿಂದ ಮಾತಾಡಿ,” ಎಂದು ಹೇಳಿದ್ದಾರೆ.