ಬೆಂಗಳೂರು: ಆನ್‌ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್ ಆಟಗಳು ಹಲವಾರು ಯುವಜನತೆಯ ಬದುಕನ್ನು ಭ್ರಷ್ಟಗೊಳಿಸಿರುವ ಸಂದರ್ಭದಲ್ಲೇ, ಈ ಚಟುವಟಿಕೆಗಳಿಗೆ ತಡೆಯೊಡ್ಡಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ. ಬೆಟ್ಟಿಂಗ್‌ಗೆ ಬಲಿಯಾಗಿ ಅನೇಕರು ಲಕ್ಷಾಂತರ-ಕೋಟ್ಯಾಂತರ ರೂಪಾಯಿ ಸಾಲದಲ್ಲಿ ಮುಳುಗಿ ಕೊನೆಗೆ ಆತ್ಮಹತ್ಯೆಗೇ ಶರಣಾಗಿದ್ದಾರೆ.
ಈ ಭಯಾನಕ ಸ್ಥಿತಿಗೆ ಕಡಿವಾಣ ಹಾಕಲು, ಕರ್ನಾಟಕ ಸರ್ಕಾರ ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆ 2025 ರನ್ನು ಸಿದ್ಧಪಡಿಸಿದ್ದು, ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಅದನ್ನು ಮಂಡಿಸಲು ಉದ್ದೇಶಿಸಿದೆ. ಹೊಸ ಮಸೂದೆ ಎನ್ನುತ್ತದೆ: ಈ ಮಸೂದೆ ಅಡಿಯಲ್ಲಿ ರಾಜ್ಯ ಸರ್ಕಾರ “ಕರ್ನಾಟಕ ಆನ್‌ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ಪ್ರಾಧಿಕಾರ” ರಚಿಸಲಿದೆ.
ಈ ಹಣ್ಣಿಗೆ ಹೃದಯಾಘಾತ ತಡೆಯೋ ಶಕ್ತಿ ಇದೆ.. ವಾರದಲ್ಲಿ ಒಮ್ಮೆಯಾದರೂ ತಪ್ಪದೇ ಸೇವಿಸಿ!
ಹೊಸ ನಿಯಮಗಳ ಜಾರಿ ಮತ್ತು ಅನುಪಾಲನೆ ನೋಡಿಕೊಳ್ಳಲಿದೆ. ಆನ್‌ಲೈನ್ ಗೇಮಿಂಗ್ ಹಾಗೂ ಗ್ಯಾಂಬ್ಲಿಂಗ್ ಮೇಲೆ ನಿಗಾ ಇರಲಿದೆ. ಕೇವಲ ಕೌಶಲ್ಯ ಆಟಗಳಿಗೆ (ಗೇಮ್ ಆಫ್ ಸ್ಕಿಲ್) ಮಾತ್ರ ಅನುಮತಿ ನೀಡಲಿದೆ.
ನಿಷೇಧಿತ ಚಟುವಟಿಕೆಗಳು: ಅದೃಷ್ಟದ ಮೇಲೆ ಆಧಾರಿತ ಆಟಗಳು (ಲಕ್ ಗೇಮ್), ಸ್ಪರ್ಧೆಗಳು ಅಥವಾ ಫಲಿತಾಂಶಗಳು ಪೂರ್ಣವಾಗಿ ಲಕ್ಕು ಮೇಲೆ ಅವಲಂಬಿತವಾಗಿರುವ ಆನ್‌ಲೈನ್ ಗ್ಯಾಂಬ್ಲಿಂಗ್ ಮತ್ತು ಬೆಟ್ಟಿಂಗ್ ಚಟುವಟಿಕೆಗಳಿಗೆ ಈ ಮಸೂದೆ ಸ್ಪಷ್ಟವಾದ ನಿಷೇಧ ಹಾಕುತ್ತಿದೆ. ಇದರಿಂದ ರಾಜ್ಯದ ಯುವ ಸಮುದಾಯವನ್ನು ಬೆಟ್ಟಿಂಗ್‌ನಂತಹ ದುಷ್ಪ್ರಭಾವಿಗಳಿಂದ ರಕ್ಷಿಸುವ ಉದ್ದೇಶದಿಂದ ಈ ಕಾನೂನು ಕ್ರಮ ಕೈಗೊಳ್ಳಲಾಗಿದೆ.