ಕೋಲಾರ: ಮಾಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೈದ್ಯ ಡಾ. ವಸಂತ್ ಕುಮಾರ್ ಮೃತರಾಗಿದ್ದು, ಅವರ ಕೊಠಡಿಯಲ್ಲಿ ಮಾಟಮಂತ್ರದ ಶಂಕಿತ ವಸ್ತುಗಳು ಪತ್ತೆಯಾಗಿವೆ. ಡಾ.ವಸಂತ್ ಕುಮಾರ್ ಹೃದಯಾಘಾತದಿಂದ ಜೂನ್-5 ರಂದು ಮೃತಪಟ್ಟಿದ್ದರು.
ಈ ಹಣ್ಣಿಗೆ ಹೃದಯಾಘಾತ ತಡೆಯೋ ಶಕ್ತಿ ಇದೆ.. ವಾರದಲ್ಲಿ ಒಮ್ಮೆಯಾದರೂ ತಪ್ಪದೇ ಸೇವಿಸಿ!
ಆಸ್ಪತ್ರೆಯಲ್ಲಿದ್ದ ಅವರ ಕೊಠಡಿ ಓಪನ್ ಮಾಡಿದ ವೇಳೆ ಮಾಠ ಮಂತ್ರ ಪತ್ತೆಯಾಗಿದ್ದು, ಅನುಮಾನಕ್ಕೆ ಕಾರಣವಾಗಿದೆ. ಪತ್ನಿ ಹಾಗೂ ಸಿಬ್ಬಂದಿಯ ಸಮ್ಮುಖದಲ್ಲಿ ತೆರೆಯಲಾಯಿತು. ಈ ವೇಳೆ, ಲಾಕರ್ ಒಳಗೆ ಎರಡು ಬೊಂಬೆಗಳು, ಮೃತ ಬಾವಲಿಗಳು ಮತ್ತು ಮಾಟಮಂತ್ರದ ಅನುಮಾನಾಸ್ಪದ ವಸ್ತುಗಳು ಪತ್ತೆಯಾದವು.
ಡಾ. ವಸಂತ್ ಕುಮಾರ್ ಅವರು ಆಸ್ಪತ್ರೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದ ವ್ಯಕ್ತಿಯಾಗಿದ್ದು, ಅವರ ಕೊಠಡಿಯಲ್ಲಿ ಈ ರೀತಿಯ ವಸ್ತುಗಳು ಪತ್ತೆಯಾಗಿರುವುದು ಶಂಕೆಗೆ ಕಾರಣವಾಗಿದೆ. ಅವರು ತಾವೇ ಇವುಗಳನ್ನು ಇಟ್ಟಿದ್ದಾರಾ ಅಥವಾ ಅವರಿಗೆ ಕೆಡುಕು ಮಾಡಲು ಇಟ್ಟಿದ್ದಾರಾ ಎಂಬುದರ ಬಗ್ಗೆ ಈಗ ತನಿಖೆ ಅಗತ್ಯವಾಗಿದೆ.ಪೊಲೀಸರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಈ ಸಂಬಂಧ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.