ಹುಬ್ಬಳ್ಳಿ: ಮನೆಯಲ್ಲಿ ಯಾರು ಇಲ್ಲದ ವೇಳೆ ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಯ ಕೃಷ್ಣಾಪುರ ಓಣಿಯಲ್ಲಿ ನಡೆದಿದೆ. ಮಹಿಜಬೀನ್ ಸಾದಿಕ್ ಬಂಕಾಪುರ ಮೃತ ಗೃಹಿಣಿ. ಯಾರು ಇಲ್ಲದಿರುವಾಗ ಮನೆಯ ಕಬ್ಬಿಣದ ರಾಡ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪತಿಯ ಕಿರುಕುಳ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಣ್ಣಿಗೆ ಹೃದಯಾಘಾತ ತಡೆಯೋ ಶಕ್ತಿ ಇದೆ.. ವಾರದಲ್ಲಿ ಒಮ್ಮೆಯಾದರೂ ತಪ್ಪದೇ ಸೇವಿಸಿ!
ಹಾವೇರಿ ಜಿಲ್ಲೆಯ ಬಂಕಾಪುರದ ಸಾದಿಕ್ ಮಹಿಜಬೀನ್ ಅವರನ್ನ ಪ್ರೀತಿ ಮಾಡಿ ಮದುವೆ ಆಗಿದ್ದ ಆದರೆ ಮಹಿಜಬೀನ್ ತಂದೆ ತಾಯಿ ಹಾಗೂ ಪೋಷಕರು ವರದಕ್ಷಿಣೆ ಕೊಟ್ಟಿಲ್ಲ ಅಂತಾ ಸಾಕಷ್ಟು ಕಿರುಕುಳ ಕೊಡುತ್ತಿದ್ದ ಇದರಿಂದ ಬೇಸತ್ತ ಮಹಿಜಬೀನ್ ಮನೆಯಲ್ಲಿ ಪತಿ ಇರುವಾಗಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ