Close Menu
Ain Live News
    Facebook X (Twitter) Instagram YouTube
    Monday, July 7
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ದೇಹಕ್ಕಿಂತ ಅತಿಯಾದ ತೂಕ ಮತ್ತು ಬೊಜ್ಜು: ಪೊಲೀಸ್ ಕಮಿಷನರ್ ಹೇಳಿದ್ದೇನು..?

    By Author AINJuly 7, 2025
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಆಯುಕ್ತಾಲಯ ಘಟಕ ವ್ಯಾಪ್ತಿಯ 65 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ 28 ದಿನಗಳ ಆರೋಗ್ಯ ಫಿಟೈಸ್ ತರಬೇತಿ ನೀಡಲಾಗಿದ್ದು, ಸುಮಾರು ಜನರು 4 ರಿಂದ 11 ಕೆಜಿಯಷ್ಟು ತೂಕ ಇಳಿಸಿಕೊಂಡು ದೈಹಿಕವಾಗಿ ಆರೋಗ್ಯವಂತರಾಗಿದ್ದಾರೆ ಎಂದು ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.

    ಇಲ್ಲಿನ ಗೋಕುಲ ರಸ್ತೆಯ ಹೊಸ ಸಿಎಆ‌ರ್ ಮೈದಾನದಲ್ಲಿ ನಡೆಯುತ್ತಿರುವ ತರಬೇತಿ ಶಿಬಿರಕ್ಕೆ ಭೇಟಿ ಪರಿವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಹಂತದ ಶಿಬಿರದಲ್ಲಿ ಘಟಕ ವ್ಯಾಪ್ತಿಯ 65 ಸಿಬ್ಬಂದಿ ಗುರುತಿಸಲಾಗಿತ್ತು. ಅವರೆಲ್ಲರೂ ನಿರಂತರವಾಗಿ 28 ದಿನಗಳ ತರಬೇತಿಯಲ್ಲಿ 400ಕ್ಕೂ ಹೆಚ್ಚು ಕೆಜಿ ತೂಕದ ಬೊಜ್ಜು ಹೊರ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

    ಈ ಹಣ್ಣಿಗೆ ಹೃದಯಾಘಾತ ತಡೆಯೋ ಶಕ್ತಿ ಇದೆ.. ವಾರದಲ್ಲಿ ಒಮ್ಮೆಯಾದರೂ ತಪ್ಪದೇ ಸೇವಿಸಿ!

    ಪೊಲೀಸ್‌ ಇಲಾಖೆಯಲ್ಲಿ ದೈಹಿಕ ಸದೃಢತೆ ಬಹಳ ಮಹತ್ವವಾಗಿದೆ. ಆ ನಿಟ್ಟಿನಲ್ಲಿ ನೇಮಕಾತಿ ಸಂದರ್ಭದಲ್ಲಿಯೇ ಅವರ ಎತ್ತರ, ತೂಕ, ಎದೆ ಸುತ್ತಳತೆ, ಓಟ, ಗುಂಡು ಎಸೆತ, ಎತ್ತರ ಜಿಗಿತ ಪರೀಕ್ಷೆಯ ನಂತರ, ಜ್ಞಾನದ ಪರೀಕ್ಷೆ ನಡೆಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆದರೆ ನೇಮಕಾತಿಯ ನಂತರ ಕರ್ತವ್ಯಕ್ಕೆ ಸೇರಿದ ಮೇಲೆ ಕೆಲವರು ಫಿಟೈಸ್‌ ಮಾಡಲ್ಲ. ಇದರಿಂದ ಬೊಜ್ಜು ಬಂದು ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಾಸ್ಪದ ರೀತಿಯಲ್ಲಿ ಆಗುತ್ತವೆ. ಆದರೆ ಸಿನಿಮಾದಲ್ಲಿ ತೋರಿಸುವಂತೆ ನಮ್ಮ ಇಲಾಖೆಯಲ್ಲಿ ಪೊಲೀಸರು ಅತಿಯಾದ ಬೊಜ್ಜು ಹೊಂದಿರುವುದಿಲ್ಲ. ಶೇ. 90ರಷ್ಟು ಜನ ದೈಹಿಕವಾಗಿ ಸದೃಢವಾಗಿದ್ದಾರೆ. ಆದರೆ ಕೆಲವರು ಆರೋಗ್ಯದ ಸಮಸ್ಯೆಯಿಂದ ದೈಹಿಕ ಸದೃಢತೆ ಹಾಳು ಮಾಡಿಕೊಂಡಿದ್ದರು ಎಂದರು.

    ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ಸೂಚನೆಯಂತೆ ಕಳೆದ ನಾಲ್ಕು ವಾರಗಳಿಂದ ಪೊಲೀಸ್ ಆಯುಕ್ತಾಲಯ ಘಟಕ ವ್ಯಾಪ್ತಿಯಲ್ಲಿ ತರಬೇತಿ ಶಿಬಿರ ನಡೆಸಲಾಗುತ್ತಿದೆ. ಇದರಲ್ಲಿ 90 ಕೆಜಿಗಿಂತ ಹೆಚ್ಚಿರುವ ಪುರುಷ ಮತ್ತು 70 ಕೆಜಿಗಿಂತ ಹೆಚ್ಚಿರುವ ಮಹಿಳಾ ಸಿಬ್ಬಂದಿ ಗುರುತಿಸಲಾಗಿತ್ತು. ಕೆಲವರು ಮೊದಲು ಅಸಡ್ಡೆ ತೋರಿದ್ದರು. ಆದರೆ ನಂತರ ಬಹಳಷ್ಟು ಸಂತೋಷದಿಂದ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಇವರಿಗೆ ಇನ್ನೊಂದು ವಾರ ತರಬೇತಿ ಮುಂದುವರೆಸಲಾಗುವುದು ಎಂದರು.

    ತರಬೇತಿಯಲ್ಲಿ ಭಾಗವಹಿಸಿದವರು 40ವರ್ಷ ಮೇಲ್ಪಟ್ಟವರಾಗಿದ್ದಾರೆ. ತರಬೇತಿಯ ಖರ್ಚನ್ನು ಸಿಬ್ಬಂದಿಗಳೇ ಮಾಡಿಕೊಂಡಿದ್ದಾರೆ. 28 ದಿನಗಳ ಶಿಬಿರದಲ್ಲಿ ಎಎಸ್‌ಐ ಮೋಹನ ಕುಲಕರ್ಣಿ 11 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಹೆಡ್ ಕಾನ್ಸಟೇಬಲ್ ರವಿ ಹೊಸಮನಿ ಮತ್ತು ಬಸವರಾಜ ಬೆಳಗಾವಿ 9 ಕೆಜಿ ಹಾಗೂ ಮಹಿಳಾ ಎಎಸ್‌ಐ ದಿಲಶಾದ್ ಮುಲ್ಲಾ 7 ಕೆಜಿ ಇಳಿಸಿಕೊಂಡಿದ್ದಾರೆ. ಒಟ್ಟಾರೆ ಬಹುತೇಕ ಸಿಬ್ಬಂದಿ 4 ರಿಂದ 11 ಕೆಜಿವರೆಗೆ ತೂಕ ಇಳಿಸಿಕೊಂಡಿದ್ದಾರೆ ಎಂದರು.

    ಒಂದು ತಿಂಗಳ ಕಾರ್ಯಾಗಾರದಲ್ಲಿ ಹೊಸ ಸಿಎಆ‌ರ್ ಮೈದಾನದಲ್ಲಿ ವಾಸ್ತವ್ಯ ನೀಡಿ ಬೆಳ್ಳಗ್ಗೆಯಿಂದ ರಾತ್ರಿಯವರೆಗೆ ವಾಕಿಂಗ್, ರನ್ನಿಂಗ್, ಯೋಗ, ಡ್ರಿಲ್, ಮೆಡಿಟೇಷನ್, ಕ್ರೀಡೆ, ಆರೋಗ್ಯಕರ ಊಟ ಸೇರಿ ವಿವಿಧ ಚಟುವಟಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇಲಾಖೆಯಲ್ಲಿ ಬೊಜ್ಜು ಇರುವವರನ್ನು ಗುರುತಿಸಿ ಇದೇ ರೀತಿ ತರಬೇತಿ ಮಾಡಲಾಗುವುದು. ಜೊತೆಗೆ ಅಧಿಕಾರಿಗಳ ಮತ್ತು ಸಿಬ್ಬಂದಿ ಕುಟುಂಬ ಸದಸ್ಯರಿಗೂ ಕೂಡ ಈ ರೀತಿಯ ತರಬೇತಿ ಅವಶ್ಯಕತೆ ಇದೆ ಎಂದು ಗುರುತಿಸಲಾಗಿದೆ. ಆ ಕುರಿತು ಯೋಜಿಸಿ, ಅವರಿಗೂ ತರಬೇತಿ ನೀಡಲಾಗುವುದು ಎಂದರು.

    Demo
    Share. Facebook Twitter LinkedIn Email WhatsApp

    Related Posts

    ಪತಿಯಿಂದ ಪತ್ನಿಗೆ ಕಿರುಕುಳ ನೇಣು ಹಾಕಿಕೊಂಡು ಪತ್ನಿ ಆತ್ಮಹತ್ಯೆ!

    July 7, 2025

    ನೀರು ಕಾಯಿಸುವ ಹಂಡೆಯಲ್ಲಿ 1 ತಿಂಗಳ ಕಂದನನ್ನೇ ಮುಳುಗಿಸಿ ಕೊಂದ ತಾಯಿ!

    July 7, 2025

    ಕೋಲಾರದ ಸರ್ಕಾರಿ ಆಸ್ಪತ್ರೆಯಲ್ಲಿ ಮಾಟ-ಮಂತ್ರ..!

    July 7, 2025

    ನಿಮ್ಮಪ್ಪನ್ನೇ ಕಾಂಗ್ರೆಸ್ ಸಿಎಂ ಮಾಡಲಿಲ್ಲ. ಇನ್ನೂ ನಿಮ್ಮನ್ನು ಮುಖ್ಯಮಂತ್ರಿ ಮಾಡುತ್ತಾ?: ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರತಾಪ್ ಸಿಂಹ ಕಿಡಿ

    July 7, 2025

    ಸದ್ದಿಲ್ಲದೇ ಪ್ರಾಣ ಬಲಿ ಪಡೆಯುತ್ತಿದೆ “ಹೃದಯ”: ಇಂದು ಮೂವರು ಹೃದಯಸ್ತಂಭನಕ್ಕೆ ಬಲಿ!

    July 7, 2025

    ವಿಜಯಪುರದ: ಶಾಲಾ ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಆತ್ಮಹತ್ಯೆ? ಕೊಲೆಯೋ?

    July 7, 2025

    ಕಲುಷಿತ ನೀರು ಸೇವಿಸಿ ಮೂವರು ಸಾವು.! ಆರು ಜನರ ಸ್ಥಿತಿ ಗಂಭೀರ – ಹೆಚ್ಚಿದ ಆತಂಕ

    July 7, 2025

    ಮೈಸೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ: ಮನೆ ಮೇಲೆ ದಾಳಿ, 8 ಮಂದಿ ಅರೆಸ್ಟ್

    July 7, 2025

    Yettinahole Project: ವಿಷ ಬೇಕಾದ್ರು ಕುಡಿಯುತ್ತೇವೆ ಡ್ಯಾಂ ನಿರ್ಮಾಣ ಮಾಡಲು ಬಿಡಲ್ಲ: ರೊಚ್ಚಿಗೆದ್ದ ಅನ್ನದಾತರು!

    July 7, 2025

    ನಿಲ್ಲದ ಹಾರ್ಟ್ ಅಟ್ಯಾಕ್: ಹೃದಯಾಘಾತಕ್ಕೆ ಬಲಿಯಾದ ಇಬ್ಬರು ರೈತರು..!

    July 7, 2025

    ಬ್ಯಾಂಕ್ ಅಧಿಕಾರಿಗಳು ಫಲಾನುಭವಿಗಳ ಜೊತೆಗೆ ಸೌಜನ್ಯದಿಂದ ವರ್ತಿಸಿ: ಪ್ರಲ್ಹಾದ್ ಜೋಶಿ

    July 7, 2025

    ನಟ ದರ್ಶನ್ ಕೇಸ್ ನಂತೆ ಮತ್ತೊಂದು ಪ್ರಕರಣ ಬೆಳಕಿಗೆ: ಹುಡುಗಿ ವಿಚಾರಕ್ಕೆ ಯುವಕನ ಬಟ್ಟೆ ಬಿಚ್ಚಿ, ಮರ್ಮಾಂಗ ತುಳಿದು ಹಲ್ಲೆ!

    July 7, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.