ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್, ತಮ್ಮ ಮುಂದಿನ ಸಿನಿಮಾ ‘ಡೆವಿಲ್’ ಶೂಟಿಂಗ್‌ಗಾಗಿ ವಿದೇಶ ಪ್ರವಾಸಕ್ಕೆ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ. ಅವರ ಪರವಾಗಿ ವಕೀಲರು 57ನೇ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಜುಲೈ 11 ರಿಂದ 30ರವರೆಗೆ ಥಾಯ್ಲೆಂಡ್‌ಗೆ ತೆರಳಲು ಅನುಮತಿ ಕೋರಲಾಗಿದೆ.
ಈ ಮೊದಲು ಜುಲೈ 1 ರಿಂದ 25ರವರೆಗೆ ದುಬೈ ಹಾಗೂ ಯುರೋಪ್ ಪ್ರವಾಸಕ್ಕೆ ಕೋರ್ಟ್ ಅನುಮತಿ ನೀಡಿತ್ತು. ಆದರೆ ಇಸ್ರೇಲ್-ಇರಾನ್ ಯುದ್ಧದ ವಾತಾವರಣ ಕಾರಣದಿಂದಾಗಿ ಆ ಯೋಜನೆ ಕೈಬಿಡಲಾಗಿತ್ತು.
ಚಿತ್ರತಂಡ ಈಗ ಥಾಯ್ಲೆಂಡ್‌ನಲ್ಲಿ ಶೂಟಿಂಗ್ ನಡೆಸಲು ನಿರ್ಧರಿಸಿದ್ದು, ಸ್ಥಳ ಹಾಗೂ ದಿನಾಂಕ ಬದಲಾವಣೆಗೆ ಕೋರ್ಟ್ ಅನುಮತಿ ಬೇಕಾಗಿದೆ. ಈ ಬಗ್ಗೆ ಅರ್ಜಿ ವಿಚಾರಣೆ ನಂತರ, ಮಂಗಳವಾರ ನ್ಯಾಯಾಲಯ ತನ್ನ ತೀರ್ಮಾನ ಪ್ರಕಟಿಸುವ ನಿರೀಕ್ಷೆ ಇದೆ.