ಧಾರವಾಡ:- ಹೃದಯಾಘಾತದಿಂದ 56 ವರ್ಷದ ಮಹಿಳೆ ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ಜರುಗಿದೆ.
ಮೊಬೈಲ್ ಫೋನ್ ಬಳಕೆ ಜಾಸ್ತಿ ಆದ್ರೆ ಮೆದುಳು ಕ್ಯಾನ್ಸರ್ ಬರಲ್ಲ.. ಸೈಡ್ ಎಫೆಕ್ಟ್ ಕಟ್ಟಿಟ್ಟ ಬುತ್ತಿ!
ಧಾರವಾಡ ತಾಲೂಕಿನ ಯಾದವಾಡ ಗ್ರಾಮದ ಶಾಂತವ್ವ ತೋಟಗೇರ ಸಾವನ್ನಪ್ಪಿದ ಮಹಿಳೆ. ನಿನ್ನೆ ಮಗಳನ್ನು ಗಂಡನ ಮನೆಯಿಂದ ಕರೆದುಕೊಂಡು ಬರಲು ಹೆಬ್ಬಳ್ಳಿ ಗ್ರಾಮಕ್ಕೆ ಬಂದಿದ್ದರು. ಆಗ ಎದೆನೋವು ಕಾಣಿಸಿಕೊಂಡಿತ್ತು.
ಬಳಿಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕುಟುಂಬದವರು ರವಾನೆ ಮಾಡಿದ್ದರು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಹುಬ್ಬಳ್ಳಿ ಕಿಮ್ಸ್ ನಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ.