ಬಾಗಲಕೋಟೆ: ನರ್ಸ್ ರೂಪದಲ್ಲಿ ಬಂದು ಬೆಳಗಿನ 4 ಗಂಟೆಗೆ ಮಗು ಕಳ್ಳತನ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಬಾಗಲಕೋಟೆ ನಗರದ ಮಾಬೂಬಿ ಮಗು ಕಳೆದುಕೊಂಡ ತಾಯಿಯಾಗಿದ್ದು, ನಿನ್ನೆ ಸಂಜೆ 7 ಗಂಟೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ನಿಮ್ಮ ಮನೆಯಲ್ಲಿ ಸೊಳ್ಳೆಗಳ ಕಾಟ ಜಾಸ್ತಿ ಆಗಿದ್ಯಾ!? ಹಾಗಿದ್ರೆ ಹೀಗೆ ಮಾಡಿ!
ಮಾಬೂಬಿಗೆ ಇದು ಎರಡನೇ ಹೆರಿಗೆಯಾಗಿದ್ದು, ಕಳ್ಳಿ ಬೆಳಿಗ್ಗೆ ಮಗುವಿಗೆ ಉಸಿರಾಟ ತೊಂದರೆಯಾಗ್ತಿದೆ ಅಂತ ಹೇಳಿ ಮಗು ಕೊಂಡೊಯ್ದಿದ್ದಾಳೆ. ಎಷ್ಟೊತ್ತಾದರೂ ಬರಲಿಲ್ಲವೆಂದು ಅನುಮಾನಗೊಂಡ ಮನೆಯವರು ಮಗುವನ್ನು ಹುಡುಕಲು ತೊಡಗಿದರು,
ಆದರೆ ಎಲ್ಲಿಯೂ ಮಗು ಪತ್ತೆಯಾಗಲಿಲ್ಲ. ಇದರಿಂದಾಗಿ ತಕ್ಷಣವೇ ನವನಗರ ಠಾಣೆಗೆ ಮಾಹಿತಿ ನೀಡಲಾಯಿತು.ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ್ವರ ಜಿದ್ದಿ ಅವರ ನೇತೃತ್ವದಲ್ಲಿ ಮೂರು ತಂಡ ರಚನೆ ಮಾಡಲಾಗಿದ್ದು, ಜಿಲ್ಲಾಸ್ಪತ್ರೆಯ ಸುತ್ತಲಿನ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.