ಗುಜುರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು ಬರೋಬ್ಬರಿ 265 ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಇದರ ಜೊತೆ ಆಕಾಶ್ ಎಂಬ 14 ವರ್ಷದ ಹುಡುಗನೊಬ್ಬ ಸಾವಿಗೀಡಾಗಿದ್ದಾನೆ. ಆತ ವಿಮಾನದ ಪ್ರಯಾಣಿಕನೂ ಅಲ್ಲ ಅಥವಾ ಆ ವಿಮಾನ ಬಂದು ಬಿದ್ದ ವೈದ್ಯಕೀಯ ಹಾಸ್ಟೆಲ್ ನಲ್ಲಿದ್ದವನೂ ಅಲ್ಲ. ಅಲ್ಲೇ ಆ ಹಾಸ್ಟೆಲ್ ಪಕ್ಕದಲ್ಲಿರುವ ಅಂಗಡಿಯಲ್ಲಿ ಇದ್ದ.
ವಿಮಾನ ಬಂದು ಬಿದ್ದಾಗ ಆಗಷ್ಟೇ ತಾಯಿ ಊಟ ಕೊಟ್ಟು ಮಲಗಿದ್ದ. ಇದ್ದಕ್ಕಿದ್ದಂತೆ ಸ್ಫೋಟದಿಂದ ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಆಕಾಶ್ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
ನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಎರಡೇ ಎರಡು ‘ನೆನೆಸಿಟ್ಟ ಬಾದಾಮಿ’ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?
ಆಕಾಶ್ನನ್ನು ಕಳೆದುಕೊಂಡ ಸಹೋದರ ಕಲ್ಪೇಶ್ ಆಕ್ರಂದನ ಮುಗಿಲು ಮುಟ್ಟಿತು. ನನ್ನ ದೊಡ್ಡಣ್ಣ ನನಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ನಾನು ಆಟೋ ಓಡಿಸುತ್ತಿದ್ದೆ. ಬೆಂಕಿ ತೀವತ್ರೆಗೆ ಗಾಯಗೊಂಡಿದ್ದ ನನ್ನ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದರು. ನನ್ನ ತಮ್ಮ ಅಲ್ಲೇ ಸಿಲುಕಿದ್ದ. ನನ್ನ ತಮ್ಮನನ್ನು ಒಮ್ಮೆ ನೋಡಲು ಬಿಡಿ ಎಂದು ಕಣ್ಣೀರು ಹಾಕುತ್ತಿದ್ದಾರೆ.
ನನ್ನ ತಮ್ಮ ಆಕಾಶ್ ಕೂಡ ಅಲ್ಲೇ ಇದ್ದ. ಆದರೆ ಅವನನ್ನು ಯಾರೂ ರಕ್ಷಣೆ ಮಾಡೋರಿಲ್ಲದೆ ಸಾವನ್ನಪ್ಪಿದ್ದಾನೆ. ನನ್ನ ತಮ್ಮ ಇಲ್ಲದೆ ನಾನು ಹೇಗೆ ಬದುಕಲಿ. ಒಮ್ಮೆ ನನ್ನ ಸಹೋದರನ ಮುಖ ನೋಡಲು ಬಿಡಿ. ದೇವರು ನನ್ನ ತಮ್ಮನ ಕಿತ್ಕೊಂಡ. ನನ್ನ ತಮ್ಮನನ್ನು ನಿನ್ನೆಯಿಂದ ನೋಡಿಲ್ಲ.
ದಯಮಾಡಿ ನನ್ನ ಚಿಕ್ಕ ತಮ್ಮನನ್ನು ನೋಡಲು ಬಿಡಿ ಎಂದು ಪರಿ ಪರಿಯಾಗಿ ಬೇಡಿಕೊಂಡರು. ನನ್ನ ತಾಯಿಗೆ ಇನ್ನೂ ವಿಷಯ ತಿಳಿದಿಲ್ಲ. ಆಕೆಗೆ ಕೂಡ ಚಿಕಿತ್ಸೆ ಕೊಡಿಸಲಾಗ್ತಿದೆ. ಮಗ ಹೇಗಿದ್ದಾನೆ ಎಂದು ಕೇಳ್ತಿದ್ದಾರೆ. ಆಕಾಶ್ಗೆ ಏನೂ ಆಗಿಲ್ಲ, ಚೆನ್ನಾಗಿದ್ದಾನೆ ಎಂದು ಅವರನ್ನು ಸಮಾಧಾನಪಡಿಸಿದ್ದೇವೆ ಎಂದು ದುಃಖಿಸಿದರು.