ಬೆಂಗಳೂರು:- 4 ವರ್ಷದ ಮಗುವನ್ನು ಏರ್ ಕೂಲರ್ ಬಲಿ ಪಡೆದಿರುವ ಘಟನೆ ಬಸವೇಶ್ವರ ನಗರದ ಕಲ್ಯಾಣಮಂಟಪವೊಂದರಲ್ಲಿ ಜರುಗಿದೆ. ಏರ್ ಕೂಲರ್ನಿಂದ ಎಲೆಕ್ಟ್ರಿಕ್ ಶಾಕ್ ಹೊಡೆದು ನಾಲ್ಕು ವರ್ಷದ ಮಗು ಮೃತಪಟ್ಟಿದೆ. ಬುಧವಾರ ಈ ಅವಘಡ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಾಲ್ತುಳಿತ ಕೇಸ್: ಆರ್ಸಿಬಿ ಫ್ರಾಂಚೈಸಿ, ಕೆಎಸ್ಸಿಎ ವಿರುದ್ಧ ದಾಖಲಾಯ್ತು FIR!
ಮೃತ ಮಗುವನ್ನು 4 ವರ್ಷದ ಎಂ.ಶಿವಂ ಎಂದು ಗುರುತಿಸಲಾಗಿದೆ. ವೆಸ್ಟ್ ಆಫ್ ಕಾರ್ಡ್ ರೋಡ್ನ ಅಭಿಮಾನಿ ಕನ್ವೆನ್ಷನ್ ಹಾಲ್ನಲ್ಲಿ ಮದುವೆ ರಿಸೆಪ್ಷನ್ ವೇಳೆ ಈ ಘಟನೆ ನಡೆದಿದೆ. ಶಿವಂ, ಕೆಂಪೆಗೌಡ ನಗರ ನಿವಾಸಿಯಾದ ಪ್ರದೀಪ್ ಮತ್ತು ದೀಪಾ ದಂಪತಿ ಪುತ್ರ ಎಂದು ತಿಳಿದುಬಂದಿದೆ. ಸಂಬಂಧಿಕರ ಮದುವೆಗೆ ಬಂದಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಮಗು ಏರ್ ಕೂಲರ್ ಬಳಿ ಬಿದ್ದಿರೋದನ್ನು ನೋಡಿ ತಾಯಿ ಹತ್ತಿರ ಹೋದಾಗ ತಾಯಿಗೂ ಕರೆಂಟ್ ಶಾಕ್ ಹೊಡೆದಿದೆ ಎಂದು ತಿಳಿದು ಬಂದಿದೆ.