ಅಮೆರಿಕ: ಅಮೆರಿಕದ ಪ್ರಖ್ಯಾತ ಉದ್ಯಮಿ ಮತ್ತು ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ಇದೀಗ ರಾಜಕೀಯ ಕ್ಷೇತ್ರಕ್ಕಿಳಿದಿದ್ದಾರೆ. ಅವರು ಹೊಸ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಿ, ದೇಶದ ಪ್ರಜಾಪ್ರಭುತ್ವದ ಪರಂಪರೆಯತ್ತ ದೊಡ್ಡ ಪ್ರಶ್ನೆ ಎತ್ತಿದ್ದಾರೆ. ನಿಮ್ಮ ಸ್ವಾತಂತ್ರ್ಯವನ್ನು ನಿಮಗೆ ಮರಳಿ ನೀಡುವ ಉದ್ದೇಶದಿಂದ ಅಮೆರಿಕಾ ಪಾರ್ಟಿಯನ್ನು ಸ್ಥಾಪಿಸಿದ್ದೇನೆ,” ಎಂದು ಎಕ್ಸ್ ಪೋಸ್ಟ್‌ನಲ್ಲಿ ಘೋಷಿಸಿದ ಮಸ್ಕ್, ಈ ಮೂಲಕ ಅಮೆರಿಕದ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ.
ಕುಂಬಳಕಾಯಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಕಣ್ಣು, ಚರ್ಮ, ಕೂದಲು ಎಲ್ಲದಕ್ಕೂ ಮದ್ದು!
ಮಸ್ಕ್ ತಮ್ಮ ಪೋಸ್ಟ್‌ನಲ್ಲಿ “ನಾವು ಪ್ರಜಾಪ್ರಭುತ್ವದಲ್ಲಿ ಅಲ್ಲ, ಏಕಪಕ್ಷ ಆಡಳಿತದಂತೆ ಕಂಡುಬರುತ್ತಿದೆ” ಎಂದಾಗಿಯೂ ಹೇಳಿದ್ದಾರೆ. ಜೊತೆಗೆ, “ಏಕಪಕ್ಷ ಆಡಳಿತವನ್ನು ಕೊನೆಗೊಳಿಸಿ” ಎಂಬ ಶೀರ್ಷಿಕೆಯೊಂದಿಗೆ ಎರಡು ತಲೆಯ ಹಾವಿನ ಮೀಮ್ ಒಂದನ್ನೂ ಹಂಚಿಕೊಂಡಿದ್ದಾರೆ.
ಅಮೆರಿಕದ ಸ್ವಾತಂತ್ರ್ಯ ದಿನಾಚರಣೆ ವೇಳೆ, “ಅಮೆರಿಕದ ದ್ವಿಪಕ್ಷೀಯ ವ್ಯವಸ್ಥೆಯಿಂದ ನೀವು ಸ್ವಾತಂತ್ರ್ಯ ಬಯಸುತ್ತೀರಾ?” ಎಂಬ ಪ್ರಶ್ನೆಯೊಂದಿಗೆ ಸಮೀಕ್ಷೆ ನಡೆಸಿದ್ದ ಮಸ್ಕ್, ಇದರಲ್ಲಿ 1.2 ಮಿಲಿಯನ್‌ಗಿಂತ ಹೆಚ್ಚು ಪ್ರತಿಕ್ರಿಯೆ ಬಂದಿರುವುದನ್ನೂ ಉಲ್ಲೇಖಿಸಿದ್ದಾರೆ.
ಟ್ರಂಪ್‌ಗೆ 2024ರ ಚುನಾವಣೆಯಲ್ಲಿ ಅತಿ ಹೆಚ್ಚು ದೇಣಿಗೆ ನೀಡಿದ್ದ ಮಸ್ಕ್, ಬಳಿಕ ಅವರಿಂದ ದೂರ ನಡೆದಿದ್ದರು. ಹಿಂದೆ ಅವರು ಫೆಡರಲ್ ವೆಚ್ಚ ಕಡಿತ ಮತ್ತು ಸರ್ಕಾರಿ ಉದ್ಯೋಗ ರದ್ದತಿ ಉದ್ದೇಶದ ಇಲಾಖೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಇದೀಗ, ಅಮೆರಿಕ ಪಾರ್ಟಿ ಎಂಬ ಹೊಸ ರಾಜಕೀಯ ಶಕ್ತಿಯ ಮೂಲಕ ಮಸ್ಕ್, ದೇಶದ ಭವಿಷ್ಯ ಪರ ಬದ್ಧತೆ ಘೋಷಿಸಿರುವುದು ಗಮನಾರ್ಹ.