ಕೋಲಾರ :- ಜಿಲ್ಲೆಯ ಮುಳಬಾಗಿಲು ನಗರದ ಹೊರವಲಯದಲ್ಲಿರುವ ಬಾರ್ ಎದುರು ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ, ಕೊಲೆಯಲ್ಲಿ ಅಂತ್ಯವಾದ ಘಟನೆ ಜರುಗಿದೆ
KKR Vs MI: ಟಾಸ್ ಗೆದ್ದ MI ಬೌಲಿಂಗ್ ಆಯ್ಕೆ – ಗೆಲುವಿನ ಖಾತೆ ತೆರೆಯುತ್ತಾ ಮುಂಬೈ!
ಮುಳಬಾಗಿಲು ಹೈದರ್ ನಗರ ನಿವಾಸಿ ಮತೀನ್ (25) ಕೊಲೆಯಾದ ವ್ಯಕ್ತಿ. ಸ್ನೇಹಿತ ಮೊಯಿನ್ನಿಂದಲೇ ಮತೀನ್ ಹತ್ಯೆಯಾಗಿದ್ದಾನೆ. ಕುಡಿದ ಮತ್ತಿನಲ್ಲಿ ಇಬ್ಬರ ಮಧ್ಯೆ ಜಗಳ ಪ್ರಾರಂಭವಾಗಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.
ಕೊಲೆಯ ದೃಶ್ಯಗಳು ಬಾರ್ಗೆ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಎಸ್ಪಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ