ಬೆಂಗಳೂರು:- ಶೇಷಾದ್ರಿಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರು ಟಚ್ ಆಗಿದ್ದಕ್ಕೆ ನಡುರಸ್ತೆಯಲ್ಲಿ ಓರ್ವ ಕಾರು ಚಾಲಕನಿಂದ ಮತ್ತೋರ್ವ ಕಾರು ಚಾಲಕನಿಗೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಜರುಗಿದೆ.
ಶೇಷಾದ್ರಿಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ಗೇಟ್ ಹಿಂಭಾಗ ಇಟಿಯೋಸ್ ಮತ್ತು ಇನ್ನೋವಾ ಕಾರು ಮಧ್ಯೆ ಟಚ್ ಆಗಿದೆ. ಕಾರು ಟಚ್ ಮಾಡಿದ ಇನ್ನೋವಾ ಕಾರು ಚಾಲಕನೇ ಇಟಿಯೋಸ್ ಕಾರು ಚಾಲಕನ ಮೇಲೆ ನಡು ರಸ್ತೆಯಲ್ಲಿ ಮಚ್ಚು ಹಿಡಿದು ಹಲ್ಲೆಗೆ ಯತ್ನಿಸಿದ್ದಾನೆ. ಗಾಡಿಯಲ್ಲಿ ಎಂಪ್ಲಾಯ್ಸ್ ಇದ್ದರು ಕೂಡ ಹಲ್ಲೆ ಮಾಡಲಾಗಿದೆ. ಬಳಿಕ ಮಾತಿಗೆ ಮಾತು ಬೆಳೆದು ಕಾರಿನಿಂದ ಮಚ್ಚು ತಂದ ಇನ್ನೋವಾ ಚಾಲಕ ಇಟಿಯೋಸ್ ಕಾರು ಚಾಲಕನ ಕುತ್ತಿಗೆಗೆ ಇಟ್ಟಿದ್ದಾನೆ.
ತಕ್ಷಣ ಇಟಿಯೋಸ್ ಕಾರು ಚಾಲಕನ ಸಹಾಯಕ್ಕೆ ಬಂದ ಜನ ತಡೆದು ಪೊಲೀಸರಿಗೆ ಫೋನ್ ಮಾಡಿದ್ದಾರೆ. ಎಲ್ಲರು ಬರ್ತಿದ್ದಂತೆ ಮಾತಾಡಿ ಎಸ್ಕೇಪ್ ಆಗಲು ಪ್ರಯತ್ನ ಮಾಡಿದ್ದಾನೆ. ಆಗ ಎಲ್ಲಾರೂ ಕಾರಿನ ಮೇಲೆ ಕಲ್ಲು ಎತ್ತಿಹಾಕಿ ತಡೆದಿದ್ದಾರೆ. ನಂತರ ಕಾರು ಅಲ್ಲೇ ಬಿಟ್ಟು ಇನ್ನೋವಾ ಚಾಲಕ ತಪ್ಪಿಸಿಕೊಂಡು ಹೋಗಿದ್ದಾನೆ. ಸದ್ಯ ಪೊಲೀಸರು ಆತನ ಪತ್ತೆ ಮಾಡಿದ್ದಾರೆ.