ಹುಬ್ಬಳ್ಳಿ : ರೈಲ್ವೇ ಸ್ಟೇಷನ್ ಪಕ್ಕದಲ್ಲಿನ ಬಾರ್ ಎದುರು ಘಟನೆ ಕ್ಷುಲ್ಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಟ ನಡೆದಿದೆ. ಭಾನುವಾರ ಸಂಜೆ ಈ ಘಟನೆ ನಡೆದಿದೆ. ಯುವಕರಿಬ್ಬರ ನಡುವೆ ನಡೆದ ಮಾರಾಮಾರಿಯಾಗಿ ಬೆಲ್ಟ್ ನಿಂದ ಕುತ್ತಿಗೆಗೆ ಬಿಗಿದು ಹೊಡೆದಾಡಿಕೊಂಡಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ನಡೆದ ಹೊಡೆದಾಟದಿಂದ ಜನರಲ್ಲಿ ಆತಂಕ ಎದುರಾಗಿತ್ತು. ಯುವಕರ ಬಡೆದಾಟದ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆ ಯಾಗಿದೆ. ಈ ಕುರಿತು ಎಲ್ಲೂ ದೂರ ದಾಖಲಾಗಿರುವುದಿಲ್ಲ. ಇವರಿಬ್ಬರೂ ಪರ ಊರಿನವರು ಎಂದು ಹೇಳಲಾಗಿದೆ. ಶಹರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ