ದೇವನಹಳ್ಳಿ: ಆಪರೇಷನ್ ಸಿಂದೂರ್ ಹಾಗೂ ರಾಷ್ಟ್ರೀಯ ಭದ್ರತೆ ಬೆಂಬಲಿಸಿ ದೇವನಹಳ್ಳಿ ಬಿಜೆಪಿ ನಾಯಕರಿಂದ ಹಮ್ಮಿಕೊಂಡಿದ್ದ ತಿರಂಗ ಯಾತ್ರೆಯಲ್ಲಿ ಸಾವಿರಾರು ಜನರು 1701 ಅಡಿ ಉದ್ದದ ತಿರಂಗ ಧ್ವಜದೊಂದಿಗೆ ರಾಜ ಬೀದಿಗಳಲ್ಲಿ ಯಾತ್ರೆ ಮಾಡಿದರು.
ದೇವನಹಳ್ಳಿ ತಾಲ್ಲೂಕು ಕಚೇರಿಯಿಂದ ಹಳೇ ಬಸ್ ನಿಲ್ದಾಣದವರೆಗೆ ದೇವನಹಳ್ಳಿ ತಾಲ್ಲೂಕು ಬಿಜೆಪಿ ಮಂಡಲದ ವತಿಯಿಂದ ಅದ್ದೂರಿಯಾದ ಯಾತ್ರೆ ಮಾಡಲಾಯಿತು. ಯಾತ್ರೆಯಲ್ಲಿ ಸಾಹಿತಿಗಳು, ನಾಗರಿಕರು, ಮಕ್ಕಳು, ಕಲಾವಿದರು, ಸಾರ್ವಜನಿಕರು ಭಾಗಿಯಾಗಿದ್ದರು.
ಎಲ್ಲರೂ ದೇಶದ ಪರ ಘೋಷಣೆಗಳನ್ನು ಕೂಗುತ್ತಾ ಬೃಹತ್ ರಾಷ್ಟ್ರಧ್ವಜವನ್ನು ಇಕ್ಕೆಲಗಳಲ್ಲಿ ಹಿಡಿದು ಸಾಗಿದರು. ತಿರಂಗರ್‍ಯಾಲಿಗೆ ಪುಷ್ಪವೃಷ್ಟಿ:ನಗರದ ವಿವಿಧೆಡೆ ತಿರಂಗ ಯಾತ್ರೆ ಸಾಗಿ ಬರುತ್ತಿದ್ದಂತೆ ನಾಗರಿಕರು ಪುಷ್ಪವೃಷ್ಟಿ ನಡೆಸುವ ಮೂಲಕ ತಮ್ಮ ಬೆಂಬಲ ವ್ಯಕ್ತಪಡಿಸಿದರು.