ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 5 ವಿಕೆಟ್‌ಗಳಿಗೆ 310 ರನ್ ಗಳಿಸಿ, ಅಂತಿಮ ಸೆಷನ್‌ನ ಆರಂಭದಲ್ಲಿ ಉಂಟಾದ ಕುಸಿತದಿಂದ ಅದ್ಭುತವಾಗಿ ಚೇತರಿಸಿಕೊಂಡಿದೆ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಭಾರತ ಉತ್ತಮ ಮೊತ್ತ ಪೇರಿಸಿದೆ. ನಾಯಕ ಶುಭಮನ್ ಗಿಲ್ ಅವರ ಅಜೇಯ ಶತಕದ ನೆರವಿನಿಂದ ಈ ಉತ್ತಮ ರನ್ ಗಳಿಸಲು ಸಾಧ್ಯವಾಗಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 85 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿದೆ. ಆರಂಭಿಕ ಆಟಗಾರ ರಾಹುಲ್ 2 ರನ್ ಗಳಿಸಿ ಔಟಾದರು. ಆದರೆ ಎರಡನೇ ವಿಕೆಟಿಗೆ ಏಕದಿನ ಶೈಲಿಯಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಕರುಣ್ ನಾಯರ್ ಬ್ಯಾಟ್ ಬೀಸಿ 90 ಎಸೆತಗಳಲ್ಲಿ 80 ರನ್ ಜೊತೆಯಾಟವಾಡಿ ಚೇತರಿಕೆ ನೀಡಿದರು
ಕರುಣ್ ನಾಯರ್ 31 ರನ್ ಗಳಿಸಿ ಔಟಾದರೆ ಯಶಸ್ವಿ ಜೈಸ್ವಾಲ್ 87 ರನ್(107 ಎಸೆತ, 13 ಬೌಂಡರಿ) ಹೊಡೆದು ಔಟಾದರು.ರಿಷಭ್ ಪಂತ್ 25 ರನ್ ಗಳಿಸಿದರೆ ನಿತೀಶ್ ಕುಮಾರ್ ರೆಡ್ಡಿ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಒಂದು ಕಡೆ ವಿಕೆಟ್ ಉರುಳುತ್ತಿದ್ದ ಗಿಲ್ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತುಕೊಂಡರು. ಗಿಲ್‌ಗೆ ರವೀಂದ್ರ ಜಡೇಜಾ (Ravindra Jadeja) ಉತ್ತಮ ಸಾಥ್ ನೀಡಿದ್ದು ಮುರಿಯದ 6ನೇ ವಿಕೆಟಿಗೆ 124 ಎಸೆತಗಳಲ್ಲಿ 99 ರನ್ ಜೊತೆಯಾಟವಾಡಿದ್ದಾರೆ.
ಗಿಲ್ ಅಜೇಯ 114 ರನ್(216 ಎಸೆತ, 12 ಬೌಂಡರಿ), ಜಡೇಜಾ ಅಜೇಯ 41 ರನ್(67 ಎಸೆತ, 5 ಬೌಂಡರಿ ಹೊಡೆದು ತಂಡದ ಮೊತ್ತವನ್ನು 300 ರನ್‌ಗಳ ಗಡಿ ದಾಟಿಸಿದರು.
ನಾಯಕನಾಗಿ ಆಡಿದ ಎರಡು ಪಂದ್ಯಗಳಲ್ಲಿ ಸತತ ಶತಕ ಸಿಡಿಸುವ ಮೂಲಕ ಭಾರತ ವಿಜಯ್ ಹಜಾರೆ, ಸುನಿಲ್ ಗವಾಸ್ಕರ್, ವಿರಾಟ್ ಕೊಹ್ಲಿ ಸಾಧನೆಯನ್ನು ಗಿಲ್ ಸರಿಗಟ್ಟಿದ್ದಾರೆ