ಮಡಿಕೇರಿ ; ಅಪ್ರಾಪ್ತ ಬಾಲಕಿ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರ ಎಸಗಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಧು ಎಂಬಾತನೇ ಈ ಕೃತ್ಯ ಎಸಗಿದ್ದು, ಸೋಮವಾರ ಸಂಜೆ ತನ್ನ ಮಗಳ ಸ್ನೇಹಿತೆಯನ್ನು ಫೋನ್ ಮಾಡಿಸಿ ಕರೆಸಿಕೊಂಡಿದ್ದಾನೆ. ಆಕೆ ಮನೆಗೆ ಹೋದ ವೇಳೆ ಚಾಕೋಲೇಟ್ ನೀಡಿ, ತನ್ನ ಮಗಳನ್ನು ಮತ್ತೆ ಚಾಕೋಲೇಟ್ ತರುವಂತೆ ನಪ ಹೇಳಿ ಕಳುಹಿಸಿದ್ದಾನೆ. ಈ ವೇಳೆ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಪೋಷಕರು ಮಗಳನ್ನು ಕಳುಹಿಸುವಂತೆ ಫೋನ್ ಮಾಡಿದರು ಸಹ ಸರಿಯಾಗಿ ಮಾತಾಡದೇ ಕಟ್ ಮಾಡಿದ್ದಾನೆ.
ಅನುಮಾನಗೊಂಡ ಬಾಲಕಿಯ ಪೋಷಕರು ಮಗಳ ಸ್ನೇಹಿತೆಯ ಮನೆಗೆ ಹೋಗಿ ವಿಚಾರ ಮಾಡುವಾಗ ತನ್ನ ಮೇಲೆ ನಡೆದಿರುವ ಘಟನೆ ಬಗ್ಗೆ ಪೋಷಕರ ಬಳಿ ಬಾಲಕಿ ಹೇಳಿಕೊಂಡಿದ್ದಾಳೆ. ಸದ್ಯ ಬಾಲಕಿಯ ಪೋಷಕರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.