ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಪುಡಿರೌಡಿಗಳು ತಡರಾತ್ರಿ ಅಟ್ಟಹಾಸ ಮೆರೆದಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನಿಗೆ ಸಾರ್ವಜನಿಕ ಸ್ಥಳದಲ್ಲೇ ಚಾಕು ಇರಿದು ಪರಾರಿಯಾಗಿರುವ ಘಟನೆ ನಗರದ ಬಾಕಳೆ ಗಲ್ಲಿಯಲ್ಲಿ ನಡೆದಿದೆ.
ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಕಳೆ ಗಲ್ಲಿಯಲ್ಲಿ ಈ ಘಟನೆ ನಡೆದಿದ್ದು, ಇಬ್ಬು ಸಿತಾರವಾಲೆ ಎಂಬ ಯುವಕನಿಗೆ ಮೂವರು ಯುವಕರು ಚಾಕು ಇರಿದು ಪರಾರಿಯಾಗಿದ್ದಾರೆ. ಬಾಕಳೆ ಗಲ್ಲಿಯಲ್ಲಿರುವ ಬೇಕರಿಯೊಂದಕ್ಕೆ ಕೇಕ್ ತರಲು ತೆರಳಿದ್ದ ಇಬ್ಬು ಸಿತಾರವಾಲೆ ಮೇಲೆ ಏಕಾಏಕಿ ಅಟ್ಯಾಕ್ ಮಾಡಿರುವ ಮೂವರು ಯುವಕರು ಚಾಕುವಿನಿಂದ ತಲೆ ಮತ್ತು ಕಿವಿ ಭಾಗಕ್ಕೆ ಇರಿದು ಪರಾರಿಯಾಗಿದ್ದಾರೆ. ಪರಿಣಾಮ ಯುವಕನ ತಲೆ ಹಾಗೂ ಕಿವಿಗೆ ಗಂಭೀರವಾಗಿ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾದಕ ವಸ್ತುಗಳ ಸೇವನೆ, ಸರಬರಾಜು ತಡೆಗೆ ಕ್ರಮ ; ಕಮೀಷನರ್ ನೇತೃತ್ವದಲ್ಲಿ ಪರೇಡ್
ದುಷ್ಕರ್ಮಿಗಳನ್ನ ಪತ್ತೆಹಚ್ಚುವ ನಿಟ್ಟಿನಲ್ಲಿ ಶಹರ ಠಾಣೆ ಪೊಲೀಸರು ಮುಂದಾಗಿದ್ದು, ಹಲ್ಲೆಗೆ ಪ್ರಮುಖ ಕಾರಣ ಹಾಗೂ ಯಾರು ಈ ಕೃತ್ಯ ಎಸಗಿದ್ದಾರೆ ಎಂಬ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.
ಒಟ್ಟಿನಲ್ಲಿ ಇಂದು ಒಂದೇ ದಿನದಲ್ಲಿ ನಗರದ ಮೂರು ಕಡೆಗಳಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಈ ರೀತಿಯ ಹಲ್ಲೆ ಪ್ರಕರಣಗಳು ನಡೆದಿದ್ದು, ಇಂತಹ ಪ್ರಕರಣಗಳಲ್ಲಿ ಭಾಗಿಯಾಗುವ ಮೂಲಕ ಸಾರ್ವಜನಿಕ ವಲಯದಲ್ಲಿ ಭಯದ ವಾತಾವರಣ ಸೃಷ್ಠಿಸುತ್ತಿರುವ ಪುಡಿರೌಡಿಗಳ ಈ ಅಟ್ಟಹಾಸವನ್ನ ಖಡಕ್ ಪೊಲೀಸ್ ಕಮಿಷನರ್ ಯಾವ ರೀತಿ ಮಟ್ಟಹಾಕುತ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.