ಬೆಂಗಳೂರು :- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಂಡರ ವರ್ತನೆ ದಿನದಿಂದ ದಿನಕ್ಕೆ ಮಿತಿಮೀರಿದೆ. ಇದೀಗ ಮುಸ್ಲಿಂ ಯುವತಿ ತನ್ನ ಗೆಳೆಯನ ಜೊತೆ ಬೈಕ್ ಮೇಲೆ ಕುಳಿತಿದ್ದಕ್ಕೆ ಪುಂಡರ ಗ್ಯಾಂಗ್‌ವೊಂದು ಕಿರಿಕ್ ಮಾಡಿ, ಯುವಕನ ಮೇಲೂ ಹಲ್ಲೆ ನಡೆಸಿದ್ದಾರೆ.
ಕೆಐಎಡಿಬಿ ಭೂ ಸ್ವಾಧೀನ ಕೈಬಿಡಿ: ಸಚಿವ ಮುನಿಯಪ್ಪ ಮನೆಗೆ ರೈತರ ಮುತ್ತಿಗೆ, ವಿಷ ಸೇವಿಸಿದ ರೈತರು
ಕಾಲೇಜು ಯುವತಿ ಬೈಕ್ ಮೇಲೆ ತನ್ನ ಗೆಳೆಯನ ಬಳಿ ಕುಳಿತಿದ್ದಳು. ಈ ವೇಳೆ ಅಲ್ಲಿಗೆ ಬಂದ ಪುಂಡರ ಗ್ಯಾಂಗ್ ಕಿರಿಕ್ ಮಾಡಿದೆ. ಕಾಲೇಜಿಗೆ ಹೋಗೋದು ಬಿಟ್ಟು ಇಲ್ಲಿ ಕೂತಿದ್ಯಾ..? ನಿಮ್ಮ ಅಪ್ಪ ಅಮ್ಮನ ನಂಬರ್ ಕೊಡು.. ಮುಸ್ಲಿಂ ಆಗಿ ಈ ರೀತಿ ಮಾಡ್ತಿದ್ಯಾ..? ಇದೇನಾ ನಿಮ್ಮ ಮನೆಯಲ್ಲಿ ಹೇಳಿಕೊಟ್ಟಿದ್ದು ಅಂತ ಪುಂಡರು ಕಿರಿಕ್ ಮಾಡಿದ್ದಾರೆ.
ಅಲ್ಲದೇ ಆ ಯುತಿಯ ಗೆಳೆಯನಿಗೂ ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ