ಬೆಂಗಳೂರು:- ಬೆಂಗಳೂರು ಪ್ರಯಾಣಿಕರು ಇದು ಮಿಸ್ ಮಾಡ್ದೆ ಓದಲೇಬೇಕಾದ ಸ್ಟೋರಿ. ಮಂಗಳವಾರದಿಂದ ಅಂದ್ರೆ ನಾಳೆಯಿಂದ ಬೆಂಗಳೂರಿನ ಪ್ರಮುಖ ರಸ್ತೆಯ ಎರಡು ಟೋಲ್ ದರ ಏರಿಕೆಯಾಗಲಿದ್ದು, ಸೋಮವಾರ ಮಧ್ಯರಾತ್ರಿಯಿಂದಲೇ ದರ ಏರಿಕೆಯಾಗಲಿದೆ.
ಹೊಸೂರು ರಸ್ತೆಯ ಎರಡು ಟೋಲ್, ಅತ್ತಿಬೆಲೆ ಮತ್ತು ಎಲೆಕ್ಟ್ರಾನಿಕ್ ಸಿಟಿ ಟೋಲ್ ದರ ಏರಿಕೆಯಾಗಲಿದೆ. ಕಾರ್, ಜೀಪ್, ಲಘು ವಾಹನ, ಭಾರಿ ವಾಹನಗಳಲ್ಲಿ ಕನಿಷ್ಠ 5 ರೂಪಾಯಿ ಹೆಚ್ಚಳವಾಗಲಿದೆ.
ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ದರ ಎಷ್ಟಾಗಲಿದೆ?
ಕಾರು, ಜೀಪ್, ನಾಲ್ಕು ಚಕ್ರದ ಲಘು ವಾಹನಗಳಿಗೆ ಒಂದು ಪ್ರಯಾಣಕ್ಕೆ 65 ರೂಪಾಯಿ (ಹಳೆ ಬೆಲೆ 60)
ಎರಡು ಕಡೆಗಿನ ಪ್ರಯಾಣಕ್ಕೆ ರೂಪಾಯಿ 90 ರೂಪಾಯಿ (ಹಳೆ ಬೆಲೆ 85)
ದ್ವಿಚಕ್ರ ವಾಹನಗಳಿಗೆ ಒಂದು ಮಾರ್ಗದ ಪ್ರಯಾಣಕ್ಕೆ 25 ರೂಪಾಯಿ ಪಾವತಿಸಬೇಕಾಗಿದೆ (ಬದಲಾವಣೆ ಇಲ್ಲ)
ಲಾರಿ (ಟ್ರಕ್) ಹಾಗೂ ಬಸ್ಗಳಿಗೆ ಒಂದು ಬದಿ ಪ್ರಯಾಣಕ್ಕೆ 175 (ಹಳೆ ಬೆಲೆ 170) ರೂಪಾಯಿ
ಮಲ್ಟಿ-ಆಕ್ಸಲ್ ವಾಹನಗಳಿಗೆ ಒಂದು ಬದಿಗೆ 350 ರೂಪಾಯಿ ಕಟ್ಟಬೇಕಿದೆ (ಹಳೆ ಬೆಲೆ 345)
ಅತ್ತಿಬೆಲೆ ಟೋಲ್ ದರ ಹೆಚ್ಚಳ
ಕಾರುಗಳು ಏಕ ಬದಿ ಪ್ರಯಾಣಕ್ಕೆ 40 ರೂಪಾಯಿ (ಹಳೆ ಬೆಲೆ 35)
ಲಘು ವಾಹನಗಳು, ಮಿನಿ ಬಸ್ 65 ರೂಪಾಯಿ (ಹಳೆ ಬೆಲೆ 60)
ಟ್ರಕ್, ಬಸ್ 125 ರೂಪಾಯಿ (ಹಳೆ ಬೆಲೆ 120)
ದೊಡ್ಡ ಮಲ್ಟಿ ಎಕ್ಸೆಲ್ ವಾಹನಗಳಿಗೆ ಒಂದು ಟ್ರಿಪ್ಗೆ 265 ರೂಪಾಯಿ ಇದೆ (ಹಳೆ ಬೆಲೆ 260)