ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಡಿ ರೌಡಿಯ ಪುಂಡಾಟಿಕೆ ಜೋರಾಗಿದೆ. ಅಂಗಡಿಯಲ್ಲಿ ಸಿಗರೇಟ್ ಕೊಟ್ಟಿಲ್ಲವೆಂದು ಪುಡಿರೌಡಿಯೋರ್ವ ವಸ್ತುಗಳನ್ನ ಬಿಸಾಡಿ ದಾಂಧಲೆ ಮಾಡಿದ್ದಾರೆ.
ಪೊಲೀಸ್ರಿಗೆ ಹೇಳ್ತೀನಿ ಅಂತ ಮಾಲೀಕ ಹೇಳಿದ್ರೆ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಪೊಲೀಸ್ರು ಏನೂ ಮಾಡ್ಕೋಳ್ಳೋಕೆ ಆಗಲ್ಲವೆಂದು ನಿಂದನೆ ಮಾಡಿದ್ದಾರೆ. ಪುಡಿ ರೌಡಿಯ ದಾಂಧಲೆ ಬಗ್ಗೆ ಅಂಗಡಿ ಮಾಲೀಕ ವಿಡಿಯೋ ಮಾಡಿದ್ದಾನೆ. ಸುದ್ದಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.