ಚಿನ್ನದ ಹಬ್ಬ ಅಕ್ಷಯ ತೃತೀಯಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಆಭರಣ ಪ್ರಿಯರ ಚಿತ್ತ ಚಿನ್ನದ ದರದತ್ತ ನೆಟ್ಟಿದೆ. ದಿನದಿಂದ ದಿನಕ್ಕೆ ಚಿನ್ನದ ದರ ಏರಿಕೆ ಕಾಣುತ್ತಿದ್ದು, ಮಧ್ಯಮವರ್ಗದ ಜನರಿಗೆ ಗಗನಕುಸುಮವಾಗುತ್ತಿದೆ. ಇನ್ನು ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಮಾಡಬೇಕು ಎಂದು ಕನಸು ಕಂಡಿದ್ದವರಿಗೆ ಇತ್ತೀಚಿನ ದರ ಏರಿಕೆಯು ಬಿಗ್ ಶಾಕ್ ನೀಡಿತು. ಆದರೆ ಇಂದು ಚಿನ್ನದ ದರ ಅಲ್ಪ ಇಳಿಕೆ ಕಂಡಿದೆ. ಇದು ಗೋಲ್ಡ್ ಪ್ರಿಯರಿಗೆ ಸ್ವಲ್ಪ ಸಮಾಧಾನ ತಂದಿದೆ.
ಬೆಂಗಳೂರಿನಲ್ಲಿ ಡೆಂಘಿ ಭೀತಿ: ಮೂರುವರೇ ತಿಂಗಳಲ್ಲಿ ದಾಖಲಾದ ಕೇಸ್ ಎಷ್ಟು? ಶಾಕಿಂಗ್ ವರದಿ ಇಲ್ಲಿದೆ!
ವಾರದ ಆರಂಭದ ಎರಡು ದಿನದಲ್ಲಿ ಗ್ರಾಮ್ಗೆ 350ಕ್ಕೂ ಹೆಚ್ಚು ರುಪಾಯಿಗಳಷ್ಟು ಏರಿಕೆಗೊಂಡಿದ್ದ ಚಿನ್ನದ ಬೆಲೆ ನಂತರ ಇಳಿಕೆಯಾಗತೊಡಗಿದೆ. ವಾರಾಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಬಹಳ ಅಲ್ಪ ಇಳಿಕೆ ಆಗಿದೆ. ಗ್ರಾಮ್ಗೆ 3 ರೂ ಇಳಿದಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 90,020 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 98,210 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,200 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 90,020 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 10,200 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ:
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,020 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 98,210 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,660 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,020 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:-
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,020 ರೂ.
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 98,210 ರೂ.
ಬೆಳ್ಳಿ ಬೆಲೆ 10 ಗ್ರಾಂಗೆ: 1,020 ರೂ.