Close Menu
Ain Live News
    Facebook X (Twitter) Instagram YouTube
    Sunday, June 8
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Bengaluru Breaking: ಬೆಂಗಳೂರಿನಲ್ಲೊಬ್ಬ ವಿಚಿತ್ರ ಕಳ್ಳ, ಈತನ ಟಾರ್ಗೆಟ್ ಎಳನೀರು ಮಾತ್ರ

    By AIN AuthorNovember 22, 2023
    Share
    Facebook Twitter LinkedIn Pinterest Email
    Demo

    ಬೆಂಗಳೂರು:- ಬೆಂಗಳೂರಿನಲ್ಲೊಬ್ಬ ವಿಚಿತ್ರ ಕಳ್ಳನೊಬ್ಬ ಇದ್ದು, ಎಲ್ಲರೂ ನಗನಾಣ್ಯ ಕಳ್ಳತನ ಮಾಡಿದ್ರೆ, ಈ ಕಳ್ಳನ ಟಾರ್ಗೆಟ್ ಮಾತ್ರ ಎಳನೀರು ಮಾತ್ರ.

    ಹೌದು, ನಗರದಲ್ಲಿ ಎಳನೀರು ಕಳ್ಳತನ ಮಾಡುತ್ತಿದ್ದ ಅಸಾಮಿಯನ್ನ ಪೊಲೀಸರು ಬಂಧಿಸಿದ್ದಾರೆ. ಗಿರಿನಗರ ಪೊಲೀಸರಿಂದ ಮೋಹನ್ ಎಂಬಾತನನ್ನು ಅರೆಸ್ಟ್ ಮಾಡಲಾಗಿದೆ. ಕಳೆದ ಮೂರು ತಿಂಗಳಿಂದ ಮೋಹನ್ ಎಳನೀರು ಕಳ್ಳತನ ಮಾಡುತ್ತಿದ್ದ. ಎಳನೀರು ಕದಿಯಲೆಂದೆ ಕಾರಿನಲ್ಲಿ ಅರಾಮಿನ ಬರುತ್ತಿದ್ದ.

    ರಾತ್ರಿ ವೇಳೆ ರಸ್ತೆ ಬದಿಯ ಎಳನೀರು ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ. ಗಿರಿನಗರದ ಮಂಕುತಿಮ್ಮನ ಪಾರ್ಕ್ ಬಳಿ ಇತ್ತೀಚಿಗೆ ಎಳನೀರು ಕಳ್ಳತನ ಮಾಡಿದ್ದ. ರಾಜಣ್ಣ ಎಂಬುವರ 1150 ಎಳನೀರು ಆರೋಪಿ ಮೋಹನ್ ಕದ್ದಿದ್ದ.

    ಈ ಸಂಬಂಧ ಎಳನೀರು ವ್ಯಾಪಾರಿ ರಾಜಣ್ಣ ಗಿರಿನಗರ ಠಾಣೆಗೆ ದೂರು ನೀಡಿದ್ದ. ಸಿಸಿಟಿವಿಗಳ ಪರಿಶೀಲನೆ ನಡೆಸಿ ಪೊಲೀಸರು ಮೋಹನ್ ನನ್ನು ಅರೆಸ್ಟ್ ಮಾಡಿದ್ದಾರೆ.

    ಬಂಧಿತನಿಂದ ಎಳನೀರು ಸೇರಿ ಎಂಟು ಲಕ್ಷ ಮೌಲ್ಯದ ಒಂದು ಕಾರು, ರಾಯಲ್ ಎನ್ ಫೀಲ್ಡ್ ಬೈಕ್ ವಶಕ್ಕೆ ಪಡೆಯಲಾಗಿದೆ.

    ಪೊಲೀಸರ ತನಿಖೆ ವೇಳೆ ಎಳನೀರು ಕಳ್ಳನ ಜೂಜಾಟ ಬೆಳಕಿಗೆ ‌ಬಂದಿದೆ. ಆನ್‌ಲೈನ್ ನಲ್ಲಿ ರಮ್ಮಿ ಆಡಿ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದ ಆರೋಪಿಯು, ಸಾಲ ಜಾಸ್ತಿ ಆಗಿದ್ದರಿಂದ ಎಳನೀರು ಕಳ್ಳತನಕ್ಕೆ ಪ್ಲಾನ್ ಮಾಡಿದ್ದ. ಪ್ರತಿದಿನ ಕಾರು ಬಾಡಿಗೆಗೆ ಪಡೆದು ಎಳನೀರು ಕಳ್ಳತನಕ್ಕೆ ಆರೋಪಿ ಬರುತ್ತಿದ್ದ. ಈ ಹಿಂದೆ ಎಳನೀರು ವ್ಯಾಪಾರಿಯಾಗಿದ್ದ ಆರೋಪಿ ಮೋಹನ್‌ ಫ್ರೀ ಟೈಂನಲ್ಲಿ ರಮ್ಮಿ ಆಡಿ ಲಕ್ಷ ಲಕ್ಷ ಸಾಲ ಮಾಡಿಕೊಂಡಿದ್ದ. ನಂತರ ಕಾರು ಬಾಡಿಗೆ ಪಡೆದು ಟ್ಯಾಕ್ಸಿ ಓಡಿಸುತ್ತಿದ್ದ.
    ನಂತರ ಟ್ಯಾಕ್ಸಿ ಬಿಟ್ಟು ರಾತ್ರಿ ವೇಳೆ ಎಳನೀರು ಕಳ್ಳತನಕ್ಕೆ ಇಳಿದಿದ್ದ.

    ಕದ್ದ ಎಳನೀರು ಮಾರಾಟಕ್ಕೆ ಪರ್ಮನೆಂಟ್ ಕಸ್ಟಮರ್ ಇಟ್ಕೊಂಡಿದ್ದ ಅಸಾಮಿ, ಎಳನೀರು ವ್ಯಾಪಾರಿಯೊಬ್ಬನಿಗೆ ಮದ್ದೂರು ಎಳನೀರು ಅಂತಾ ಮಾರಾಟ ಮಾಡಿ ಹೋಗುತ್ತಿದ್ದ. ಡೈಲಿ 100-150 ಎಳನೀರು ಕದ್ದು ಮಾರಾಟ ಮಾಡುತ್ತಿದ್ದರು. ತಮಿಳುನಾಡು ಮೂಲದ ಆರೋಪಿ ಮೋಹನ್ ಎನ್ನಲಾಗಿದೆ.

    ಮಡಿವಾಳದಲ್ಲಿ ವಾಸವಾಗಿದ್ದ ಮೋಹನ್ ನನ್ನು ಸಧ್ಯ ಅರೆಸ್ಟ್ ಮಾಡಿರುವ ಪೊಲೀಸ್ ತನಿಖೆ ಕೈಗೊಂಡಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಕಾಲ್ತುಳಿತ ಕೇಸ್: ಮೃತರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಹೆಚ್ಚಿಸಿದ ರಾಜ್ಯ ಸರ್ಕಾರ!

    June 7, 2025

    ಕರ್ನಾಟಕದ ಈ ಜಿಲ್ಲೆಗಳಲ್ಲಿ ಜೂ.11ರ ಬಳಿಕ ಜೋರು ಮಳೆ ಸಾಧ್ಯತೆ: ಈ ಜಿಲ್ಲೆಗಳಿಗೆ ಹೈ ಅಲರ್ಟ್!

    June 7, 2025

    ಚಿನ್ನಸ್ವಾಮಿ ದುರಂತಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ: ಗೋವಿಂದ ಕಾರಜೋಳ!

    June 7, 2025

    ಚಿನ್ನಸ್ವಾಮಿ ಕಾಲ್ತುಳಿತ ಕೇಸ್: ಇದೊಂದು ಲಜ್ಜೆಗೇಡಿ ಸರ್ಕಾರ – ಸಚಿವ ಸೋಮಣ್ಣ ಆಕ್ರೋಶ

    June 7, 2025

    ಮಳೆ ಹಾನಿ ಪ್ರದೇಶಗಳಿಗೆ ಶಾಸಕಿ ಮಂಜುಳಾ ಲಿಂಬಾವಳಿ ಭೇಟಿ, ಪರಿಶೀಲನೆ

    June 7, 2025

    RCB ವಿಜಯೋತ್ಸವದಲ್ಲಿ ಕಾಲ್ತುಳಿತ ಕೇಸ್: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು!

    June 7, 2025

    ಐದಾರು ಮಂದಿ ಪಕ್ಕಾ ಪ್ಲಾನ್ ಮಾಡಿ ನನ್ನ ಮುಗಿಸಿದ್ರು: ನಟ ಮಡೆನೂರು ಮನು

    June 7, 2025

    ಆಫೀಸ್’ನಲ್ಲಿ ನಿಮ್ಮ ಬಾಸ್’ನನ್ನು ಇಂಪ್ರೆಸ್ ಮಾಡಬೇಕೆಂದರೆ ಹೀಗೆ ಮಾಡಿ..! ರಿಸಲ್ಟ್ ಗ್ಯಾರಂಟಿ

    June 7, 2025

    ಚಿನ್ನಸ್ವಾಮಿ ಕಾಲ್ತುಳಿತ ಕೇಸ್: ಅಧಿಕಾರಿಗಳ ತಲೆದಂಡ ಕುರಿತು ನಟಿ ರಮ್ಯಾ ಹೇಳಿದ್ದೇನು..?

    June 7, 2025

    ಸೂಟ್ ಕೇಸ್’ನಲ್ಲಿ ಬಾಲಕಿಯ ಶವ ಪತ್ತೆ ಕೇಸ್: ಬಿಹಾರದಲ್ಲಿ 7 ಜನರ ಬಂಧನ!

    June 7, 2025

    ಫೈನಲ್ ಪಂದ್ಯ ಗೆಲ್ಲುವ ಮೊದಲೇ ವಿಜಯೋತ್ಸವಕ್ಕೆ ಅನುಮತಿ ಕೇಳಿದ್ದ RCB: ಹೆಚ್.ಡಿ. ಕುಮಾರಸ್ವಾಮಿ

    June 7, 2025

    ಕಾಲ್ತುಳಿತ ಪ್ರಕರಣ: ವರದಿ ನೀಡುವಂತೆ ಜಸ್ಟೀಸ್ ಕುನ್ಹಾ ಆಯೋಗಕ್ಕೆ ಸರ್ಕಾರ ಸೂಚನೆ!

    June 7, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.