Close Menu
Ain Live News
    Facebook X (Twitter) Instagram YouTube
    Thursday, May 29
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    New Virus: ಚೀನಾದಲ್ಲಿ ಹರಡುತ್ತಿದೆ ಭಯಾನಕ ರೋಗ! ಏನಿದರ ಲಕ್ಷಣ..? HMPV ಬಂದರೆ ಏನು ಮಾಡಬೇಕು..? ಇಲ್ಲಿದೆ ಉತ್ತರ

    By Author AINJanuary 4, 2025
    Share
    Facebook Twitter LinkedIn Pinterest Email
    Demo

    ಕೋವಿಡ್ ವೈರಸ್​ ಜಗತ್ತನ್ನು ಕಾಡಿದ ಐದು ವರ್ಷಗಳ ಬಳಿಕ ಇದೀಗ ಚೀನಾದಲ್ಲಿ ಮತ್ತೊಂದು ವೈರಸ್​ ವೇಗವಾಗಿ ಹರಡುತ್ತಿರುವ ಕುರಿತು ವರದಿಯಾಗಿದೆ. ಅದುವೇ, ‘ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್’ ಈ ವರ್ಷ ಆರಂಭದಲ್ಲಿ ಚೀನಾದಲ್ಲಿ ಕಾಣಿಸಿಕೊಂಡಿರುವ ಹೊಸ ವೈರಸ್​ ಇದು. ನೆರೆಯ ರಾಷ್ಟ್ರಗಳು ಈ ವೈರಸ್​ ಪತ್ತೆ ಮಾಡುವ ನಿಟ್ಟಿನಲ್ಲಿ ಸ್ಕ್ರೀನಿಂಗ್ ಹಾಗೂ ಪ್ರತ್ಯೇಕತೆಯ ಪ್ರೋಟೋಕಾಲ್‌ಗಳನ್ನು ಘೋಷಿಸಲು ಮುಂದಾಗಿವೆ.

    ಎಚ್ ಎಂಪಿವಿ ವೈರಸ್ ಬಗ್ಗೆ ನಿಮಗೆಷ್ಟು ಗೊತ್ತು?

    ಚೀನಾದ ರೋಗ ನಿಯಂತ್ರಣ ಪ್ರಾಧಿಕಾರವು ಡಿಸೆಂಬರ್ 27 ರಂದು, ಅಪರಿಚಿತ ಮೂಲದ ನ್ಯುಮೋನಿಯಾ ಪ್ರಕರಣಗಳ ಮೇಲೆ ನಾವು ಹೆಚ್ಚು ಗಮನಹರಿಸುತ್ತಿದ್ದೇವೆ ಎಂಬ ಮಾತನ್ನು ಹಂಚಿಕೊಂಡಿತ್ತು. ಸಾಮಾನ್ಯವಾಗಿ ಚಳಿಗಾಲದಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುವ ನಿರೀಕ್ಷೆಯಿರುವದರಿಂದ ಡಿಸೆಂಬರ್ 16 ಮತ್ತು 22 ರ ನಡುವೆ ಉಸಿರಾಟದ ಸೋಂಕುಗಳ ಹೆಚ್ಚಳವನ್ನು ತೋರಿಸುವ ಡೇಟಾವನ್ನು ಕೂಡ ಹಂಚಿಕೊಂಡಿತ್ತು.

    ದಾಲ್ಚಿನ್ನಿ ಎಲೆ ಅಡುಗೆಗೆ ಮಾತ್ರವಲ್ಲ ದೇಹಕ್ಕೂ ನೀಡುತ್ತದೆ ಆರೋಗ್ಯಕಾರಿ ಪ್ರಯೋಜಗಳು!

    ಚಳಿಗಾಲ ಮತ್ತು ವಸಂತಕಾಲದಲ್ಲಿ ಚೀನಾದಲ್ಲಿ ವಿವಿಧ ರೀತಿಯ ಉಸಿರಾಟದ ಸೋಂಕುಗಳು ಕಂಡು ಬರುವ ಸಾಧ್ಯತೆಯಿದೆ ಎಂದು ಅಲ್ಲಿನ ಸರ್ಕಾರಿ ಅಧಿಕಾರಿ ಕಾನ್ ಬಿಯಾವೊ ಒಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಜೊತೆಗೆ, ಈ ವರ್ಷ ಒಟ್ಟು ಪ್ರಕರಣಗಳ ಸಂಖ್ಯೆ ಕಳೆದ ವರ್ಷಕ್ಕಿಂತ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಅವರು ಉಲ್ಲೇಖಿಸಿದ್ದರು.

    ಉತ್ತರ ಚೀನಾದಲ್ಲಿ ಹರಡಿರುವ ಎಚ್ಎಂಪಿವಿ ವೈರಸ್

    ಚೀನಾದ ಆರೋಗ್ಯ ಅಧಿಕಾರಿಗಳು ದೇಶದ ಉತ್ತರ ಭಾಗಗಳಲ್ಲಿ ವೈರಸ್ ಹರಡುತ್ತಿದೆ ಎಂಬುದನ್ನು ದೃಢಪಡಿಸಿದ್ದಾರೆ. ಎಚ್ಎಂಪಿವಿ ಎಂದು ಕರೆಯಲ್ಪಡುವ ಈ ವೈರಸ್ ಎಲ್ಲಾ ವಯಸ್ಸಿವರಲ್ಲಿಯೂ ಕಂಡುಬರಬಹುದು. ಆದರೆ ಮಕ್ಕಳಲ್ಲಿ ಹೆಚ್ಚು ಸಾಮಾನ್ಯವಾಗಿರುತ್ತದೆ. ಹಾಗಾಗಿ ಸಾರ್ವಜನಿಕರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗಿದೆ. ಅದರಲ್ಲಿಯೂ ಅಲ್ಲಿನ ಪರಿಸ್ಥಿತಿ ಗಂಭೀರವಾಗಿದ್ದು, ಸಾಮಾಜಿಕ ಮಾಧ್ಯಮ ವರದಿಗಳು ಕೂಡ ಇದನ್ನು ಸಾಬೀತುಪಡಿಸಿದೆ.

    ಎಚ್ಎಂಪಿವಿ ರೋಗಲಕ್ಷಣಗಳು;

    ಮಾಧ್ಯಮ ವರದಿಗಳ ಪ್ರಕಾರ, ಎಚ್ಎಂಪಿವಿ ರೋಗಲಕ್ಷಣಗಳು ಫ್ಲೂಗೆ ಹೋಲುತ್ತವೆ. ಹಾಗಾಗಿ ಕೆಮ್ಮು, ಜ್ವರ, ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ತೀವ್ರವಾದ ಸಂದರ್ಭಗಳಲ್ಲಿ, ಇದು ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾಕ್ಕೆ ಕಾರಣವಾಗಬಹುದು. ವೈರಸ್ ಹೆಚ್ಚಾಗಲು 3 ರಿಂದ 6 ದಿನಗಳನ್ನು ತೆಗೆದುಕೊಳ್ಳುತ್ತದೆ, ರೋಗಲಕ್ಷಣಗಳು ತೀವ್ರತೆಯ ಆಧಾರದ ಮೇಲೆ ವಿಭಿನ್ನ ಅವಧಿಯ ವರೆಗೆ ಇರುತ್ತದೆ.

    ಎಚ್ ಎಂಪಿವಿ ಹೇಗೆ ಹರಡುತ್ತದೆ?

    ಎಚ್ಎಂಪಿವಿ ಇತರ ಉಸಿರಾಟದ ವೈರಸ್ಗಳಂತೆ ಹರಡುತ್ತದೆ:

    – ಕೆಮ್ಮು ಮತ್ತು ಸೀನುವಿಕೆ

    – ಕೈ ಕುಲುಕುವುದು ಅಥವಾ ವ್ಯಕ್ತಿಯ ನಿಕಟ ಸಂಪರ್ಕ

    – ಕಲುಷಿತ ಮೇಲ್ಮೈಗಳನ್ನು ಸ್ಪರ್ಶಿಸುವುದು ಅಥವಾ ಮುಖವನ್ನು ಸ್ಪರ್ಶಿಸುವುದು (ಬಾಯಿ, ಮೂಗು ಅಥವಾ ಕಣ್ಣುಗಳು).

    ಎಚ್ ಎಂಪಿವಿ ರೋಗಲಕ್ಷಣಗಳು ಕಂಡು ಬಂದರೆ ಏನು ಮಾಡಬೇಕು?

    ಎಚ್ ಎಂಪಿವಿ ಅಥವಾ ನೆಗಡಿಯ ರೋಗಲಕ್ಷಣಗಳನ್ನು ಕಂಡು ಬರುವುದಕ್ಕಿಂತ ಮುಂಚೆಯೇ ಈ ಸರಳ ನೈರ್ಮಲ್ಯ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ಇದು ಯಾವುದೇ ರೀತಿಯ ವೈರಸ್ ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ.

    – ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ: ಸೀನುವಾಗ ಅಥವಾ ಕೆಮ್ಮುವಾಗ ಟಿಶ್ಯೂ ಬಳಸಿ.

    – ನಿಮ್ಮ ಕೈಗಳನ್ನು ಆಗಾಗ ತೊಳೆಯಿರಿ: ವೈರೆಸ್ ಹರಡುವ ಅಪಾಯವನ್ನು ಕಡಿಮೆ ಮಾಡಲು ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಕನಿಷ್ಠ 20 ಸೆಕೆಂಡುಗಳ ಕಾಲ ಸ್ವಚ್ಛಗೊಳಿಸಿ.

    – ವೈಯಕ್ತಿಕ ವಸ್ತುಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ: ಸೋಂಕು ಹರಡುವುದನ್ನು ತಡೆಯಲು ಪಾತ್ರೆ, ಕಪ್ ಅಥವಾ ಇತರ ವಸ್ತುಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ.

    – ಅನಾರೋಗ್ಯದಿಂದ ಬಳಲುತ್ತಿದ್ದರೆ ಮನೆಯಲ್ಲಿಯೇ ಇರಿ: ವೈರಸ್ ಇತರರಿಗೆ ಹರಡುವುದನ್ನು ತಪ್ಪಿಸಲು ಮನೆಯಲ್ಲಿಯೇ ವಿಶ್ರಾಂತಿ ಪಡೆಯಿರಿ.

    Demo
    Share. Facebook Twitter LinkedIn Email WhatsApp

    Related Posts

    ಗಟ್ಟಿಮುಟ್ಟಾದ ಮೂಳೆ ನಿಮ್ಮದಾಗಬೇಕಾ!? ಹಾಗಿದ್ರೆ ಈ ಬೀಜಗಳನ್ನು ತಿನ್ನುವ ಅಭ್ಯಾಸ ಇಟ್ಟುಕೊಳ್ಳಿ!

    May 29, 2025

    ರೈತರಿಗೆ ಸಿಹಿ ಸಮಾಚಾರ: ಕಿಸಾನ್ ಕ್ರೆಡಿಟ್‌ಕಾರ್ಡ್ ಬಗ್ಗೆ ಕೇಂದ್ರದಿಂದ ಮಹತ್ವದ ಮಾಹಿತಿ!

    May 29, 2025

    ನೀವು ನಿತ್ಯ ಮೊಸರು ತಿನ್ನುತ್ತಿದ್ದೀರಾ!? ಹಾಗಿದ್ರೆ ದೇಹದ ಮೇಲಾಗುವ ಪರಿಣಾಮದ ಬಗ್ಗೆ ತಿಳಿಯಿರಿ

    May 28, 2025

    ಪಾರ್ಕಿಂಗ್ ವಿಚಾರಕ್ಕೆ ಕಿರಿಕ್: ಪಕ್ಕದ ಮನೆಯವನ ಮೂಗು ಕಚ್ಚಿದ ಭೂಪ!

    May 28, 2025

    ಸೈಟ್ ರಿಜಿಸ್ಟರ್ ಆಗದೇ ಪರದಾಡುತ್ತಿದ್ದೀರಾ!? ನಿಮಗಿಲ್ಲಿದೆ ಗುಡ್ ನ್ಯೂಸ್!

    May 28, 2025

    ಮತ್ತೆ ಮೊಳಗಲಿದೆ ವಾರ್‌ ಸೈರನ್‌..ನಾಳೆ 4 ರಾಜ್ಯದಲ್ಲಿ ಮಾಕ್‌ ಡ್ರೀಲ್!?

    May 28, 2025

    ನಿಮಗಿದು ಗೊತ್ತಾ!? ಪ್ರತಿಯೊಬ್ಬರೂ ಮೊಳಕೆ ಬರಿಸಿದ ಹೆಸರುಕಾಳನ್ನು ತಿನ್ನಲೇಬೇಕಂತೆ! ಯಾಕೆ?

    May 28, 2025

    ಕಿಡ್ನಿ ಸ್ಟೋನ್‌ ಸಮಸ್ಯೆಯಿಂದ ಬಳಲುತ್ತಿದ್ದೀರಾ!? ಹಾಗಿದ್ರೆ ಹೀಗೆ ಮಾಡಿ ಕ್ಷಣಾರ್ಧದಲ್ಲಿ ಚಮತ್ಕಾರ ಗ್ಯಾರಂಟಿ!

    May 28, 2025

    ಕನ್ನಡ ಕಿಡಿ ಹಚ್ಚಿಸಿದ ಕಮಲ್‌ ಹಾಸನ್‌ ರಾಜ್ಯಸಭೆ ಪ್ರವೇಶಿಸಲು ರೆಡಿ..!

    May 28, 2025

    ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನದ ದರ ಕೊಂಚ ಇಳಿಕೆ.. ಇಲ್ಲಿದೆ ಇಂದಿನ ದರಪಟ್ಟಿ!

    May 28, 2025

    ದೇಶದ ಈ ರಾಜ್ಯದಲ್ಲಿ ಜೂನ್ 2ರವರೆಗೆ ಮಳೆಯ ಅಬ್ಬರ ಜೋರು!

    May 27, 2025

    ಸಿನಿಮಾದಲ್ಲಿ ಅಮೋಘ ಸಾಧನೆ: ರಾಷ್ಟ್ರಪತಿಯಿಂದ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್!

    May 27, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.