ಹಿಂದಿಯ ಸೂಪರ್ಹಿಟ್ ಧಾರಾವಾಹಿಯ ಸೆಟ್ನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಇನ್ನೇನು ಇವತ್ತಿನ ಚಿತ್ರೀಕರಣ ಪ್ರಾರಂಭವಾಗುವ ಹಂತದಲ್ಲಿದ್ದಾಗಲೇ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ಭೀಕರತೆ ಎಷ್ಟಿತ್ತು ಎಂದರೆ ಕೆಲವೇ ಕ್ಷಣಗಳಲ್ಲಿ ಅನುಪಮಾ ಧಾರಾವಾಹಿಯ ಇಡೀ ಸೆಟ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಚಿನ್ನ ವಂಚಕಿ ಐಶ್ವರ್ಯಾ ಗೌಡಗೆ ಭಾರೀ ಸಂಕಷ್ಟ: ED ಇಂದ ಆಸ್ತಿ ಮುಟ್ಟುಗೋಲು!
ಆದರೆ ಅವಘಡದಲ್ಲಿ ಯಾರಿಗೂ ಯಾವುದೇ ಗಾಯಗಳಾಗಿರುವ ಬಗ್ಗೆ ಮಾಹಿತಿ ಬಂದಿಲ್ಲ. ಒಂದು ವೇಳೆ ಶೂಟಿಂಗ್ ಆರಂಭವಾದ ನಂತರ ಈ ಘಟನೆ ನಡೆದಿದ್ದರೆ ಭಾರೀ ದೊಡ್ಡ ಅನಾಹುತವೇ ನಡೆದಿರುವುದು.ಅಖಿಲ ಭಾರತ ಚಲನಚಿತ್ರ ಕಾರ್ಮಿಕರ ಸಂಘ ಈ ಘಟನೆಯನ್ನು ನಿರ್ಲಕ್ಷ್ಯ ಎಂದು ಖಂಡಿಸಿದೆ.
ಬೆಂಕಿಯ ಕಾರಣಗಳ ಬಗ್ಗೆ ಉನ್ನತ ಮಟ್ಟದ ತನಿಖೆಗೆ AICWA ಒತ್ತಾಯಿಸಿದೆ. ಬೆಂಕಿಯಂತಹ ಸಂದರ್ಭಗಳನ್ನು ಎದುರಿಸಲು ಎಲ್ಲಾ ಶೂಟಿಂಗ್ ಸ್ಥಳಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಅಳವಡಿಸಬೇಕು ಎಂದು AICWA ಒತ್ತಾಯಿಸುತ್ತಿದೆ. ‘